Sunday, 15th December 2024

ಉತ್ತರಾಖಂಡ್‌’ನಲ್ಲಿ ಜೂನ್ 9 ರವರೆಗೆ ಕರೋನಾ ಕರ್ಫ್ಯೂ

ಡೆಹರಾಡೂನ್: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಸೋಮ ವಾರ ‘ಕರೋನಾ ಕರ್ಫ್ಯೂ’ವನ್ನು ಜೂನ್ 9 ರವರೆಗೆ ವಿಸ್ತರಿಸಿದೆ. ಆದರೂ, ಕರ್ಫ್ಯೂ ಸಡಿಲಿಕೆ ನೀಡಲು ನಿರ್ಧರಿಸ ಲಾಗಿದೆ.

ವಾರದಲ್ಲಿ ಎರಡು ದಿನ ಜೂನ್ 1 ಮತ್ತು ಜೂನ್ 7 ರಂದು ಕಿರಾಣಿ ಅಂಗಡಿಗಳು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ತೆರೆಯುತ್ತವೆ. ಈ ಮೊದಲು ಕಿರಾಣಿ ಅಂಗಡಿಗಳು ಬೆಳಿಗ್ಗೆ 8 ರಿಂದ 11 ರವರೆಗೆ ಒಂದು ದಿನ ಮಾತ್ರ ತೆರೆಯುತ್ತಿದ್ದವು. ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳ ಅಂಗಡಿಗಳು ಸಹ ಜೂನ್ 1 ರಂದು ಮಾತ್ರ ಒಂದು ದಿನ ತೆರೆಯಲ್ಪಡುತ್ತವೆ ಮತ್ತು ಇತರ ಎಲ್ಲ ನಿರ್ಬಂಧಗಳು ಮುಂದುವರಿಯುತ್ತವೆ.

ಉತ್ತರಾಖಂಡವು ಕಳೆದ 24 ಗಂಟೆಗಳಲ್ಲಿ 1,226 ಹೊಸ ಕೋವಿಡ್ -19 ಪ್ರಕರಣಗಳು ವರದಿ ಮಾಡಿದೆ.