Thursday, 19th September 2024

ಕರೋನಾ ಭೀತಿ: ಮಹಾರಾಷ್ಟ್ರದಲ್ಲಿ ಜ.31ರ ವರೆಗೂ ಶಾಲೆ ಬಂದ್‌

ಮುಂಬೈ: ಕರೋನಾ ವೈರಸ್​ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿಗಳು ಜ. 31ರ ವರೆಗೂ ಬಂದ್​ ಇರಲಿವೆ. 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ಮುಂದುವರಿಯಲಿದೆ ಎಂದು ಬೃಹನ್​ ಮುಂಬೈ ಮುನ್ಸಿಪಾಲ್​ ಕಾರ್ಪೋರೇಷನ್​ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಭಾನುವಾರ 11,877 ಹೊಸ ಕೋವಿಡ್​ ಕೇಸ್, ಶನಿವಾರ ವರದಿಯಾದ ಕೋವಿಡ್ ಕೇಸ್​ಗಳಿಗಿಂತ 2707 ಹೆಚ್ಚಿದೆ. ಅಲ್ಲದೇ 50 ಓಮಿಕ್ರಾನ್​ ಪ್ರಕರಣಗಳು ಸಹ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 9 ಮಂದಿ ಮೃತಪಟ್ಟಿದ್ದು, ಈ ಸಂಖ್ಯೆ 1,41,542 ಆಗಿದೆ.