Thursday, 12th December 2024

ಮುಲಾಯಂ ಸಿಂಗ್ ಯಾದವ್’ಗೆ ಕೊರೋನಾ ಸೋಂಕು ದೃಢ

ಲಕ್ನೊ: ಸಮಾಜವಾದಿ ಪಕ್ಷದ ವರಿಷ್ಠ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಆವರಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಪಕ್ಷ ಟ್ವೀಟ್ ಮೂಲಕ ತಿಳಿಸಿದೆ.

ಸಮಾಜವಾದಿ ಪಕ್ಷದ ಸಂಸ್ಥಾಪಕ ಯಾದವ್ ಗೆ ಕೋವಿಡ್-19 ಸೋಂಕು ತಗಲಿದೆ. ವೈದ್ಯರುಗಳು ಅವರ ಮೇಲ್ವಿಚಾರಣೆ ನಡೆಸು ತ್ತಿದ್ದಾರೆ. ಈಗ ಅವರಲ್ಲಿ ಯಾವುದೇ ಸೋಂಕಿನ ಲಕ್ಷಣ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಲಾಯಂ ಅವರ ಪತ್ನಿ ಸಾಧನಾ ಯಾದವ್ ಗೂ ಕೊರೋನ ಸೋಂಕು ತಗಲಿದೆ.

ಮುಲಾಯಂ ಸೆ.23ರಂದು ಕೊನೆಗೊಂಡಿರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ್ದರು. ಮುಲಾಯಂ ಪ್ರಸ್ತುತ ಉತ್ತರಪ್ರದೇಶದ ಮೈನ್ಪುರಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.