ಚೆನ್ನೈ : ಐಐಟಿ ಮದ್ರಾಸ್‌ನಲ್ಲಿ 66 ವಿದ್ಯಾರ್ಥಿಗಳು ಹಾಗೂ 5 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆ ಕ್ಯಾಂಪಸ್‌ನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.
ಮದ್ರಾಸ್ ಐಐಟಿಯಲ್ಲಿನ 66 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೇ 5 ಮಂದಿ ಸಿಬ್ಬಂದಿಗೂ ಸೋಂಕು ತಗುಲಿದೆ. ಈ ಹಿನ್ನೆಲೆ ಎಲ್ಲರಿಗೂ ತಮ್ಮ ಹಾಸ್ಟೆಲ್ ಗಳಲ್ಲೇ ಕ್ವಾರಂಟೈನ್ ಆಗಲು ಸೂಚಿಸಲಾಗಿದ್ದು, ನಗರದಿಂದ ಬರುತ್ತಿದ್ದ ಸಿಬ್ಬಂದಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ವರ್ಕ್ ಫ್ರಂ ಹೋಂ ಅವಕಾಶ ನೀಡಲಾಗಿದೆ.
ಕ್ಯಾಂಪಸ್‌ನ್ನು, ಶಿಕ್ಷಣ ಸಂಸ್ಥೆಯ ಲ್ಯಾಬ್, ಗ್ರಂಥಾಲಯ ಹಾಗೂ ಎಲ್ಲಾ ವಿಭಾಗ ಗಳನ್ನು ಸೀಲ್ ಡೌನ್ ಮಾಡಲಾಗಿದೆ.