Saturday, 14th December 2024

ಇಳಿಕೆಯಾಗದ ಕರೋನಾ ಹರಡುವಿಕೆ: 3,49,691 ಹೊಸ ಪ್ರಕರಣ ಪತ್ತೆ

#corona

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,49,691 ಹೊಸ ಕರೋನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 2,767 ಸೋಂಕಿತರು ಮೃತಪಟ್ಟು, 2,17,113 ಸೋಂಕಿತರು ಗುಣಮುಖ ರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಈವರೆಗೂ ಒಟ್ಟು 1,40,85,110 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, 26,82,751 ಸಕ್ರಿಯ ಪ್ರಕರಣಗಳಿವೆ. ಈವರೆಗೆ 14.09 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಶನಿವಾರ ಒಂದೇ ದಿನ 17,19,588 ಮಾದರಿಗಳು ಪರೀಕ್ಷೆಗೆ ಒಳಪಟ್ಟಿವೆ ಎಂದು ಭಾರತೀಯ ವೈದ್ಯಕೀಯ ಅಧ್ಯಯನ ಸಂಸ್ಥೆ (ಐಸಿಎಂಆರ್‌) ತಿಳಿಸಿದೆ.

ಸೋಂಕು ಪ್ರಕರಣಗಳ ಪೈಕಿ ಮೊದಲನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಒಟ್ಟಾರೆ 42,28,836 ಜನರಿಗೆ ಸೋಂಕು ತಗುಲಿದ್ದು, 6,96,298 ಸಕ್ರಿಯ ಪ್ರಕರಣಗಳಿವೆ. ಈವರೆಗೆ 34,68,610 ಜನರು ಸೋಂಕಿನಿಂದ ಗುಣಮುಖರಾಗಿದ್ದು, 63,928 ಜನರು ಸಾವಿಗೀಡಾಗಿದ್ದಾರೆ.

13,04,397 ಒಟ್ಟು ಪ್ರಕರಣಗಳೊಂದಿಗೆ ಕರ್ನಾಟಕವು 2,34,502 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಈವರೆಗೂ 10,55,612 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, 14,283 ಜನರು ಮೃತಪಟ್ಟಿದ್ದಾರೆ.