Thursday, 12th December 2024

ಕಾರು-ಶಾಲಾ ಬಸ್ ಡಿಕ್ಕಿ: ದಂಪತಿ ಸಾವು, 10 ಮಕ್ಕಳಿಗೆ ಗಾಯ

ಅಮೃತಸರ: ಅಮೃತಸರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಶಾಲಾ ಬಸ್ ನಡುವೆ ಡಿಕ್ಕಿ ಸಂಭವಿಸಿ, ಜಮ್ಮು ಮೂಲದ ದಂಪತಿ ಮೃತಪಟ್ಟಿದ್ದು, 10 ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಖಾಸಗಿ ಶಾಲೆಯ ಬಸ್ ಸೋಹಿಯಾ ಗ್ರಾಮದ ಬಳಿ ಹೆದ್ದಾರಿಗೆ ಬಂದು ಸೇರಿಕೊಳ್ಳುತ್ತಿತ್ತು. ಆದರೆ ಬಸ್ ಚಾಲಕ ಕಾರು ಹಿಂದಿನಿಂದ ಬರು ತ್ತಿರುವುದನ್ನು ಗಮನಿಸದ ಹಿನ್ನೆಲೆಯಲ್ಲಿ ಕಾರು ಡಿಕ್ಕಿ ಹೊಡೆದಿದೆ. ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

ಕಾರು ಬಸ್ಸಿಗೆ ಡಿಕ್ಕಿ ಹೊಡೆದಾಗ, ಅದರ ಹಿಂದೆ ಬರುತ್ತಿದ್ದ ಮರಳು ತುಂಬಿದ ಟ್ರಕ್ ಚಾಲಕ ಬಲ ವಾಗಿ ಬ್ರೇಕ್ ಹಾಕಿದ್ದಾರೆ. ಆದರೆ ವಾಹನ ಸ್ಕಿಡ್ ಆಗಿ ಉರುಳಿ ಬಿದ್ದು ಟ್ರಕ್ ಚಾಲಕ ಗಾಯಗೊಂಡಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಬಸ್ ಚಾಲಕ ಸಹ ಗಾಯಗೊಂಡಿದ್ದು, ಮಕ್ಕಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿ ದ್ದಾನೆ. ಮಕ್ಕಳನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಪಾಯದಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.