Sunday, 15th December 2024

ಕೋವಿಡ್‌-19: ಪ್ರಕರಣಗಳ ಸಂಖ್ಯೆ 91,77,841

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಕೋವಿಡ್‌-19 ದೃಢಪಟ್ಟ 37,975 ಹೊಸ ಪ್ರಕರಣಗಳು ದಾಖಲಾಗಿವೆ.

ಮಂಗಳವಾರದವರೆಗೂ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 91,77,841 ಮುಟ್ಟಿದ್ದು, ಈ ಪೈಕಿ 86,04,955 ಮಂದಿ ಗುಣಮುಖ ಹಾಗೂ 1,34,218 ಮಂದಿ ಸಾವಿಗೀಡಾಗಿದ್ದಾರೆ. ಪ್ರಸ್ತುತ 4,38,667 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 42,314 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಸರ್ಕಾರ ಅಂಕಿಅಂಶಗಳ ಪ್ರಕಾರ, ಒಟ್ಟು ಪ್ರಕರಣಗಳ ಪೈಕಿ ಶೇ 93.76 ಗುಣಮುಖರಾಗಿದ್ದಾರೆ ಹಾಗೂ ಶೇ 1.46ರಷ್ಟು ಸಾವು ಸಂಭವಿಸಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ 4.78.

ಐಸಿಎಂಆರ್‌ ಪ್ರಕಾರ, ದೇಶದಲ್ಲಿ ಒಟ್ಟು 13,36,82,275 ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌ -19 ಪರೀಕ್ಷೆ ಮಾಡಲಾ ಗಿದೆ. ಸೋಮವಾರ ಒಂದೇ ದಿನ 10,99,545 ಮಾದರಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಮಹಾರಾಷ್ಟ್ರದಲ್ಲಿ 82,915 ಸಕ್ರಿಯ ಪ್ರಕರಣಗಳು, ಕೇರಳದಲ್ಲಿ64,292, ದೆಹಲಿಯಲ್ಲಿ 37,329 ಹಾಗೂ ಪಶ್ಚಿಮ ಬಂಗಾಳದಲ್ಲಿ 25,030 ಸಕ್ರಿಯ ಪ್ರಕರಣಗಳಿವೆ.