Thursday, 24th October 2024

ಕೋವಿಡ್-19ರ ನಿರ್ವಹಣೆಗಾಗಿ ನಿರ್ವಹಣಾ ಶಿಷ್ಟಾಚಾರ ಬಿಡುಗಡೆ

ನವದೆಹಲಿ : ದೇಶದಲ್ಲಿ ಅತೀ ವೇಗವಾಗಿ ಹರಡುತ್ತಿರುವ ವೈರಸ್‌ ಕೋವಿಡ್-19ರ ನಿರ್ವಹಣೆ ಗಾಗಿ ಆಯುರ್ವೇದ ಮತ್ತು ಯೋಗ ಆಧಾರಿತ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ನಿರ್ವಹಣಾ ಶಿಷ್ಟಾಚಾರವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಂಗಳವಾರ ಬಿಡುಗಡೆ ಮಾಡಿದರು.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಆಯುಷ್ ಸಚಿವ ಶ್ರೀಪಾದ್ ನಾಯಕ್ ಉಪಸ್ಥಿತಿಯಲ್ಲಿ ಈ ಬಿಡುಗಡೆ ಮಾಡಲಾಯಿತು.

ಎಸ್‌ಓಪಿಯಲ್ಲಿ ಕರೋನಾ ವೈರಸ್ ಸೋಂಕು ತಡೆಗಟ್ಟಲು ಮತ್ತು ಸೌಮ್ಯ ಮತ್ತು ಅಸಂಪ್ರದಾ ಯಿಕ ರೋಗ ಪ್ರಕರಣಗಳ ಚಿಕಿತ್ಸೆಗಾಗಿ ಆಹಾರ ಕ್ರಮಗಳು, ಯೋಗ ಮತ್ತು ಆಯುರ್ವೇದ ಗಿಡಮೂಲಿಕೆಗಳು ಮತ್ತು ಸೂತ್ರಗಳನ್ನು ಪಟ್ಟಿ ಮಾಡಲಾಗಿದೆ.

ಈ ಶಿಷ್ಟಾಚಾರವು ಕೋವಿಡ್19 ನ ನಿರ್ವಹಣೆಯಲ್ಲಿ ಮಾತ್ರವಲ್ಲದೆ, ಆಧುನಿಕ ಕಾಲದ ಸಮಸ್ಯೆ ಗಳನ್ನು ಪರಿಹರಿಸುವ ಸಾಂಪ್ರ ದಾಯಿಕ ಜ್ಞಾನವನ್ನು ಪ್ರಸ್ತುತಗೊಳಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ’ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಶ್ರೀಪಾದ್ ನಾಯಕ್, ಸಚಿವಾಲಯವು ಈ ಉಪಕ್ರಮಕ್ಕೆ ಕಾರ್ಯತಂತ್ರಗಳನ್ನು ರೂಪಿಸಿ ಅಭಿವೃದ್ಧಿ ಪಡಿಸುತ್ತಿದೆ ಎಂದು ಹೇಳಿದರು. ಆಯುರ್ವೇದ ಮತ್ತು ಯೋಗ ಮಧ್ಯಸ್ಥಿಕೆಗಳ ಸಮನ್ವಯ ಸಮಿತಿಯೊಂದನ್ನು ಸಚಿವಾಲಯ ಸ್ಥಾಪಿಸಿದೆ. ಈ ಸಮಿತಿ, ಮಾಜಿ ಡೈರೆಕ್ಟರ್ ಜನರಲ್ ಐಸಿಎಂಆರ್ ಮತ್ತು ತಜ್ಞರ ತಂಡದ ಅಧ್ಯಕ್ಷ ಡಾ.ವಿ.ಎಂ.ಕಟೋಚ್ ಅಧ್ಯಕ್ಷತೆಯಲ್ಲಿ ನಡೆಯಿತು.