ಈ ಅವಧಿಯಲ್ಲಿ 285 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರಿಂದ ಸೋಂಕಿತರ ಸಂಖ್ಯೆ 4,63,530 ಕ್ಕೆ ಏರಿಕೆಯಾಗಿದೆ.
ಕೇರಳ ರಾಜ್ಯವೊಂದರಲ್ಲೇ 6,468 ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ 999 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 872 ಪ್ರಕರಣಗಳು, ತಮಿಳುನಾಡು ರಾಜ್ಯದಲ್ಲಿ 809 ಪ್ರಕರಣಗಳು ಮತ್ತು ಮಿಜೋರಾಂನಲ್ಲಿ 387 ಕೋವಿಡ್ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಐದು ರಾಜ್ಯಗಳಲ್ಲೇ ದೇಶದ ಶೇ.84.6 ರಷ್ಟು ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಕೇರಳ ರಾಜ್ಯವೊಂದರಲ್ಲೇ ಶೇ. 57.39 ರಷ್ಟು ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 11,376 ರೋಗಿಗಳು ಚೇತರಿಸಿಕೊಂಡಿದ್ದಾರೆ. ದೇಶಾದ್ಯಂತ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,38,37,859 ಕ್ಕೆ ತಲುಪಿದೆ.