Monday, 9th December 2024

ಕೋವಿಡ್‌ ಬ್ರೇಕಿಂಗ್‌: 41,506 ಹೊಸ ಪ್ರಕರಣ ಪತ್ತೆ, 41,526 ಮಂದಿ ಗುಣಮುಖ

#corona

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 41,506 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 895 ಸೋಂಕಿತರು ಪ್ರಾಣ ಕಳೆದುಕೊಂಡಿ ದ್ದಾರೆ.

ಒಂದೇ ದಿನ 41,526 ಮಂದಿ ಕರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಕೋವಿಡ್‌ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 2,99,75,064ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ 4,08,040 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಒಟ್ಟು 37,60,32,586 ಡೋಸ್ ಲಸಿಕೆ ನೀಡಲಾಗಿದೆ.