ನವದೆಹಲಿ: ಗುರುವಾರ 24 ಗಂಟೆಗಳ ಅವಧಿಯಲ್ಲಿ ಕೋವಿಡ್-19 ದೃಢಪಟ್ಟ 2,00,739 ಹೊಸ ಪ್ರಕರಣಗಳು ದಾಖಲಾಗಿವೆ.
ಎರಡನೇ ದಿನ ಸಾವಿನ ಸಂಖ್ಯೆ ಒಂದು ಸಾವಿರ ದಾಟಿದೆ.
ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಮಹಾರಾಷ್ಟ್ರ ಸರ್ಕಾರವು ಸೋಂಕು ನಿಯಂತ್ರಣಕ್ಕಾಗಿ ನಿಷೇದಾಜ್ಞೆ, ವಾರಾಂತ್ಯದ ಲಾಕ್‌ಡೌನ್, ಕರ್ಫ್ಯೂ ಕ್ರಮಗಳನ್ನು ಅವಳವಡಿಸಿಕೊಂಡಿದೆ. ದೆಹಲಿ, ಹರಿಯಾಣ, ಗುಜರಾತ್, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ರಾತ್ರಿ ಕರ್ಫ್ಯೂ ವಿಧಿಸಿಕೊಂಡಿವೆ.
ಕೋವಿಡ್ ಎರಡನೇ ಅಲೆಯು ವ್ಯಾಪಿಸುತ್ತಿದ್ದು, ಶೀಘ್ರವೇ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳು ವಂತೆ ಸರ್ಕಾರಗಳು ಜನರಿಗೆ ಮಾನವಿ ಮಾಡುತ್ತಿವೆ.
ಪ್ರಸ್ತುತ ದೇಶದಲ್ಲಿ 14,71,877 ಪ್ರಕರಣಗಳು ಸಕ್ರಿಯವಾಗಿವೆ. 1,73,123 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೋವಿಡ್‌ನಿಂದ 93,528 ಮಂದಿ ಗುಣಮುಖರಾಗಿದ್ದಾರೆ.