Thursday, 12th December 2024

ಭೂಪಿಂದರ್ ಸಿಂಗ್ ಹೂಡಾ, ಪತ್ನಿಗೆ ಕರೋನಾ ಸೋಂಕು ದೃಢ

ಹರಿಯಾಣ: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ಪತ್ನಿ ಆಶಾ ಹೂಡಾ ಅವರಿಗೆ ಕರೋನಾ ವೈರಸ್ ಸೋಂಕು ದೃಢಪಟ್ಟಿದೆ.

ಹೂಡಾ ಲಘು ಜ್ವರದಿಂದ ಬಳಲುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ ಹಿರಿಯರನ್ನು ಗುರಗಾಂವ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಪಕ್ಷದ ಶಾಸಕ ಬಿ ಬಿ ಬಾತ್ರಾ ತಿಳಿಸಿದ್ದಾರೆ.

ಕರೋನಾ ಸೋಂಕು ತಗುಲಿದವರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇರಳ ಸಿಎಂ ಪಿಣರಾಯಿ ವಿಜಯನ್, ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್, ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಸೇರಿದಂತೆ ಅನೇಕ ರಾಜಕಾರಣಿಗಳ ಜೊತೆ ಹೂಡಾ ಸೇರಿದ್ದಾರೆ.

ಶುಕ್ರವಾರ, ರಾಜ್ಯದ ಮತ್ತೊಬ್ಬ ಹಿರಿಯ ಕಾಂಗ್ರೆಸ್ ಮುಖಂಡ ರಂದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಕೂಡ ಕೋವಿಡ್ -19 ಸೋಂಕು ತಗುಲಿದೆ. ಕಳೆದ ವರ್ಷ ಹೂಡಾ ಅವರ ಪುತ್ರ ಮತ್ತು ರಾಜ್ಯಸಭಾ ಸಂಸದ ದೀಪೇಂದರ್ ಸಿಂಗ್ ಹೂಡಾ ಕೂಡ ಕರೋನಾ ವೈರಸ್ ರೋಗಕ್ಕೆ ತುತ್ತಾಗಿದ್ದರು.