Friday, 8th November 2024

ನಿತೀಶ್ ಕುಮಾರ್’ಗೆ ಕರೋನಾ ಸೋಂಕು ದೃಢ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರ ಲಿಲ್ಲ. ಮಾಜಿ ರಾಷ್ಟ್ರ ಪತಿ ರಾಮನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಸಮಾರಂಭ ಮತ್ತು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಸಮಾರಂಭ ದಲ್ಲಿಯೂ ಭಾಗವಹಿಸಿರಲಿಲ್ಲ.

 

ಅಂದಿನಿಂದ ನಿತೀಶ್ ಕುಮಾರ್‌ ಬಿಜೆಪಿಯೊಂದಿಗಿನ ಅಸಮಾಧಾನದಿಂದ ಈ ಕಾರ್ಯಕ್ರಮಗಳಿಗೆ ಹಾಜರಾಗಲಿಲ್ಲ ಎಂಬ ಊಹಾಪೋಹಗಳು ಹರಿದಾಡಿದ್ದವು.

ಮಂಗಳವಾರ ಬೆಳಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 14,830 ಹೊಸ ಸೋಂಕಿತರು ಕಂಡುಬಂದರೆ, ಸಕ್ರಿಯ ಪ್ರಕರಣಗಳು 3365 ರಷ್ಟು ಕಡಿಮೆಯಾಗಿ 1,47,512 ರಷ್ಟಿದೆ.