ನವದೆಹಲಿ: ದಿನೇ ದಿನೇ ಕೋವಿಡ್ ಸೋಂಕಿನ ಏರಿಕೆ ಹಾಗೂ ಸಾವುಗಳ ಪ್ರಮಾಣವೂ ತೀವ್ರಗೊಳ್ಳುತ್ತಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯಗಳಿಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಜಾಗೃತಗೊಳಿಸುವಂತೆ ಸೂಚನೆ ನೀಡಿದೆ.
ದೈನಂದಿನ ವರದಿಯ ಪ್ರಕಾರ ಸೋಂಕಿನ ಪ್ರಮಾಣ ಆರು ಸಾವಿರ ಗಡಿ ದಾಟಿದೆ. 203 ದಿನಗಳ ಬಳಿಕ ಈ ಪ್ರಮಾಣದ ಹೆಚ್ಚು ಸೋಂಕು ದಾಖಲಾಗಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.3.39ರಷ್ಟಿದೆ.
ಗುರುವಾರ ಒಂದೇ ದಿನ 14 ಸಾವಿನ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಮೂರು, ಕರ್ನಾಟಕ, ರಾಜಸ್ತಾನದಲ್ಲಿ ತಲಾ ಎರಡು, ದೆಹಲಿ, ಗುಜರಾತ್, ಹರ್ಯಾಣ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ ಮತ್ತು ಪಂಜಾಬ್‍ನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದ್ದರೆ, ಕೇರಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.