Sunday, 15th December 2024

12,591 ಹೊಸ ಕೋವಿಡ್ ಪ್ರಕರಣಗಳು ದಾಖಲು

#corona

ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 12,591 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ಸುಮಾರು ಎಂಟು ತಿಂಗಳಲ್ಲಿ ಅತಿ ಹೆಚ್ಚು, ಆದರೆ ಸಕ್ರಿಯ ಪ್ರಕರಣಗಳು 65,286 ಕ್ಕೆ ಏರಿದೆ ಎಂದು ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ. 40 ಸಾವುಗಳೊಂದಿಗೆ ಸಾವಿನ ಸಂಖ್ಯೆ 5,31,230 ಕ್ಕೆ ಏರಿದೆ. ಇದರಲ್ಲಿ 11 ಸಾವು ಕೇರಳದಿಂದ ವರದಿಯಾಗಿದೆ.

ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.48 ಕೋಟಿ ದಾಖಲಾಗಿದೆ. ದೈನಂದಿನ ಪಾಸಿಟಿವ್ ದರವು 5.46 ಪ್ರತಿಶತ ಹಾಗೂ ವಾರದ ಪಾಸಿಟಿವ್ ದರವು 5.32 ಪ್ರತಿಶತದಷ್ಟಿತ್ತು.

ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳಲ್ಲಿ 0.15 ಪ್ರತಿಶತವನ್ನು ಒಳಗೊಂಡಿವೆ.