Thursday, 12th December 2024

456 ಹೊಸ ಕರೋನಾ ಪ್ರಕರಣ ಪತ್ತೆ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 456 ಹೊಸ ಕರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,46,89,968ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,406ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಶನಿವಾರ ತಿಳಿಸಿದೆ.
ಇದೇ ಅವಧಿಯಲ್ಲಿ ಗುಜರಾತ್ನಲ್ಲಿ ಒಂದು ಸಾವು ಸೇರಿದಂತೆ ಈವರೆಗೆ ಮೃತಪಟ್ಟವರ ಸಂಖ್ಯೆ 5,30,780ಕ್ಕೆ ಏರಿಕೆ ಯಾಗಿದೆ.
ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ 0.01ರಷ್ಟು ಸಕ್ರಿಯ ಪ್ರಕರಣಗಳಿದ್ದು, ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ 98.80ರಷ್ಟಿದೆ. ಸದ್ಯ ಈವರೆಗೆ 4,41,55,782 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ ಎಂದು ಸಚಿವಾ ಲಯ ತಿಳಿಸಿದೆ.
ಲಸಿಕಾ ಅಭಿಯಾನದ ಅಡಿಯಲ್ಲಿ ಈವರೆಗೆ 220.64 ಕೋಟಿಗೂ ಅಧಿಕ ಕೋವಿವ್ ವಿರುದ್ಧದ ಲಸಿಕಾ ಡೋಸ್ಗಳ ನ್ನು ವಿತರಿಸಲಾಗಿದೆ.