Saturday, 23rd November 2024

ಹೊಸದಾಗಿ 5,000 ಮಂದಿಗೆ ಕರೋನಾ ದೃಢ

ವದೆಹಲಿ: ಕರೋನಾ ಇಳಿಕೆಯ ಖುಷಿಯಲ್ಲಿದ್ದ ಜನತೆಗೆ ಆಘಾತ ಎನ್ನುವಂತೆ, ಇತ್ತೀಚಿಗೆ ಕರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಗುರುವಾರ ಹೊಸದಾಗಿ 5,000 ಮಂದಿಗೆ ಕರೋನಾ ದೃಢಪಟ್ಟಿದೆ.

ಈವರೆಗೆ ಸೋಂಕಿನಿಂದಾಗಿ ದೇಶದಲ್ಲಿ 530916ರಷ್ಟು ಮಂದಿ ಸಾವನ್ನಪ್ಪಿದ್ದಾರೆ.

ಭಾರತವು ಗುರುವಾರ 5,000 ಕ್ಕೂ ಹೆಚ್ಚು ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಸಕ್ರಿಯ ಪ್ರಕರಣಗಳ ಸಂಖ್ಯೆ 25,587 ಕ್ಕೆ ತಲುಪಿದೆ ಎಂದು ಹೇಳಿದೆ. ಈ ಮೂಲಕ ಭಾರತದಲ್ಲಿ 24 ಗಂಟೆಗಳಲ್ಲಿ 5,000 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.