Friday, 22nd November 2024

ಕೋವಿಡ್-19: 3,421 ಪ್ರಕರಣಗಳು ಸಕ್ರಿಯ

ವದೆಹಲಿ: ದೇಶದಲ್ಲಿ ಕೋವಿಡ್-19 ದೃಢಪಟ್ಟ 157 ಹೊಸ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ. ಇದರೊಂದಿಗೆ ಸದ್ಯ ದೇಶದಲ್ಲಿ 3,421 ಪ್ರಕರಣಗಳು ಸಕ್ರಿಯವಾಗಿವೆ.

ಸಚಿವಾಲಯವು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಇದುವರೆಗೆ ಪತ್ತೆ ಯಾಗಿರುವ ಪ್ರಕರಣಗಳ ಸಂಖ್ಯೆ 4,46,77,459ಕ್ಕೆ ತಲುಪಿದೆ. ಈ ಪೈಕಿ ಈವರೆಗೆ 4,41,43,342 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಹೊಸದಾಗಿ ಒಬ್ಬ ಸೋಂಕಿತ ಮೃತಪಟ್ಟಿರುವುದೂ ಸೇರಿ, ಸಾವಿನ ಸಂಖ್ಯೆ, 5,30,696ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 49,464 ಜನರಲ್ಲಿ ಕೋವಿಡ್‌ ಮಾದರಿ ಪರೀಕ್ಷೆ ನಡೆಸಲಗಿದೆ. ಒಟ್ಟಾರೆ ಪ್ರಕರಣಗಳಿಗೆ ಹೋಲಿಸಿದರೆ, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 0.01 ರಷ್ಟಿದೆ. ಗುಣಮುಖರಾದವರ ಪ್ರಮಾಣ ಶೇ. 98.80 ರಷ್ಟು ಇದೆ ಎಂದು ಹೇಳಿದೆ.

ಇದುವರೆಗೆ 220.06 ಕೋಟಿ ಡೋಸ್‌ ಕೋವಿಡ್ ಲಸಿಕೆ ವಿತರಿಸಲಾಗಿದೆ. ಸೋಮವಾರ 3,428 ಪ್ರಕರಣಗಳು ಸಕ್ರಿಯವಾಗಿದ್ದವು.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರ ಆಗಸ್ಟ್‌ 7 ರಂದು 20 ಲಕ್ಷದ ಗಡಿ ದಾಟಿತ್ತು. ಅದೇ ವರ್ಷದ ಆಗಸ್ಟ್‌ 23ರಂದು 30 ಲಕ್ಷ, ಸೆಪ್ಟೆಂಬರ್‌ 5ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16ರಂದು 50 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ನಂತರ ಸೆಪ್ಟೆಂಬರ್‌ 28, ಅಕ್ಟೋಬರ್‌ 11, ಅಕ್ಟೋಬರ್‌ 29 ಹಾಗೂ ನವೆಂಬರ್‌ 20ರಂದು ಕ್ರಮವಾಗಿ 60 ಲಕ್ಷ, 70 ಲಕ್ಷ, 80 ಲಕ್ಷ ಹಾಗೂ 90 ಲಕ್ಷ ಪ್ರಕರಣಗಳು ದಾಖಲಾಗಿದ್ದವು.

Read E-Paper click here