Wednesday, 11th December 2024

ಹೈ ಲೆವೆಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: 37 ಬುಕ್ಕಿಗಳು, 70 ಮೊಬೈಲ್ ಫೋನ್‌ ವಶ

ಜೈಪುರ: ರಾಜಸ್ಥಾನದ ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೈ ಲೆವೆಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಜಾಲವೊಂದನ್ನು ಬೇಧಿಸಲಾಗಿದೆ.

ಒಟ್ಟು 37 ಬುಕ್ಕಿಗಳನ್ನು ವಶಕ್ಕೆ ಪಡೆದಿದ್ದು, 70 ಮೊಬೈಲ್ ಫೋನ್‌ಗಳನ್ನು ಅಧಿಕಾರಿ ಗಳು ವಶಪಡಿಸಿಕೊಂಡಿದ್ದಾರೆ.

ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಿ ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಸಂಬಂಧಿಸಿ ಬೆಟ್ಟಿಂಗ್‌ಗಳು ನಡೆದಿವೆ. ಬುಕ್ಕಿಗಳು 30 ಸೆಕೆಂಡ್ ಮುಂಗಡವಾಗಿ ಪ್ರಸಾರವಾಗುವ ಟೆಲಿಕಾಸ್ಟ್ ಮಾಡಿದ್ದರು. ಆರೋಪಿಗಳು ಸ್ಟೇಡಿಯಂ ಒಳಗೆ ಕುಳಿತು ಟೆಲಿಕಾಸ್ಟ್ ಆಧಾರದ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದರು.

ಒಟ್ಟು 37 ಬುಕ್ಕಿಗಳನ್ನು ಬಂಧಿಸಲಾಗಿದ್ದು ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಇಂತಹ ಬೆಟ್ಟಿಂಗ್ ರಿಂಗ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಬಹಿರಂಗಪಡಿಸಿದ್ದಾರೆ.