ಉಜ್ಜೈನಿ: ಇಲ್ಲಿನ ಮಹಾಕಾಲೇಶ್ವರ ದೇವಸ್ಥಾನದ (Mahakaleshwar Temple) ಆವರಣದಲ್ಲಿ ದುರಂತವೊಂದು ಸಂಭವಿಸಿದೆ (Crime News). ಇಲ್ಲಿನ ಫುಡ್ ಸೆಂಟರ್ ನಲ್ಲಿ ಬಟಾಟೆ ಸುಲಿಯುವ ಯಂತ್ರಕ್ಕೆ ‘ದುಪ್ಪಟಾ’ ಸಿಲುಕಿ 30 ವರ್ಷ ಪ್ರಾಯದ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ದುರ್ಘಟನೆ ದೇವಸ್ಥಾನದ ಅನ್ನ ಕ್ಷೇತ್ರದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಲಕ್ಷ್ಮಿ ನಾರಾಯಣ ಗರ್ಗ್ ವರದಿಗಾರರಿಗೆ ತಿಳಿಸಿದ್ದಾರೆ.
ಭೋಜನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ರಜನಿ ಖತ್ರಿ ಎಂಬವರೇ ಈ ರೀತಿಯಾಗಿ ದುರಂತ ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ಆಕೆಯ ದುಪ್ಪಟಾ ಬಟಾಟೆ ಸುಲಿಯುವ ಯಂತ್ರಕ್ಕೆ ಸಿಲುಕಿ ಈ ದುರಂತ ಸಂಭವಿಸಿತು ಎಂದು ಘಟನಾ ಸ್ಥಳದಲ್ಲಿದ್ದ ಖಾಸಗಿ ಸೆಕ್ಯುರಿಟಿ ಏಜೆನ್ಸಿಯ ಸಿಬ್ಬಂದಿಗಳು ಹಾಗೂ ಇತರೇ ಮಹಿಳೆಯರು ಘಟನೆಯ ಮಾಹಿತಿ ನೀಡಿದರು ಎಂದು ಅವರು ಮಾಹಿತಿ ನೀಡಿದ್ದಾರೆ. ಆಕಸ್ಮಿಕವಾಗಿ ಯಂತ್ರಕ್ಕೆ ದುಪ್ಪಟ ಸಿಲುಕಿಕೊಂಡು ಅದು ಸಂತ್ರಸ್ತೆಯ ಕುತ್ತಿಗೆಗೆ ಸಿಲುಕಿಕೊಂಡು ಬಿಗಿಯಾಯಿತು. ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದರು. ಪೋಸ್ಟ್ ಮಾರ್ಟಂ ವರದಿಯಲ್ಲಿ ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿದುಬರುವ ನಿರೀಕ್ಷೆಯಿದೆ.
ಈ ಸುದ್ದಿಯನ್ನೂ ಓದಿ: Shivamogga News: ಟಿವಿ ರಿಮೋಟ್ ಕೊಡದ್ದಕ್ಕೆ ಇಲಿ ಪಾಷಾಣ ಸೇವಿಸಿ ಬಾಲಕಿ ಆತ್ಮಹತ್ಯೆ
ಮೃತ ಯುವತಿಯ ಕುಟುಂಬಕ್ಕೆ ಸರಕಾದಿಂದ ಸೂಕ್ತ ಪರಿಹಾರ ನಿಡಲಾಗುವುದು ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಈ ಅನ್ನಕ್ಷೇತ್ರವು ಮಹಾಕಾಲೇಶ್ವರ ದೇವಸ್ಥಾನದಿಂದ ಕೇವಲ 500 ಮೀಟರ್ ದೂರದಲ್ಲಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಪೂರೈಸಲಾಗುವ ಅನ್ನಪ್ರಸಾದವನ್ನು ಇಲ್ಲೇ ತಯಾರಿಸಲಾಗುತ್ತದೆ.