Sunday, 15th December 2024

ಜೂ.20 ರವರೆಗೆ ಕರ್ಫ್ಯೂ ವಿಸ್ತರಿಸಿದ ಆಂಧ್ರ ಸರ್ಕಾರ

ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ ಸೋಮವಾರ ಕೋವಿಡ್ ಕರ್ಫ್ಯೂ ಅನ್ನು ರಾಜ್ಯದಾದ್ಯಂತ ಜೂನ್ 20 ರವರೆಗೆ ವಿಸ್ತರಿಸಿದೆ.

ಆದಾಗ್ಯೂ, ಕರ್ಫ್ಯೂ ಅವಧಿಯನ್ನು ದಿನಕ್ಕೆ ಎರಡು ಗಂಟೆಗಳ ಕಾಲ ಕಡಿತ ಗೊಳಿಸಿದ್ದು, ಜೂನ್ 10 ರ ನಂತರ ಮಧ್ಯಾಹ್ನ 2 ರಿಂದ ಬೆಳಿಗ್ಗೆ 6 ರವರೆಗೆ ಜಾರಿಯಲ್ಲಿರುತ್ತದೆ. ಮೇ 5 ರಂದು ಮೊದಲು ಹೇರಿದ ಕೋವಿಡ್ ಕರ್ಫ್ಯೂ ಜೂನ್ 10 ರಂದು ಕೊನೆಗೊಳ್ಳ ಬೇಕಿತ್ತು. ಆದರೆ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಇದನ್ನು ಇನ್ನೂ ಹತ್ತು ದಿನಗಳವರೆಗೆ ವಿಸ್ತರಿಸಲು ನಿರ್ಧರಿಸಿದರು.

ಎಲ್ಲಾ ಸರ್ಕಾರಿ ಕಚೇರಿಗಳು ಜೂನ್ 20 ರವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಮುಖ್ಯಮಂತ್ರಿ ಕಛೇರಿ ಪ್ರಕಟಣೆ ತಿಳಿಸಿದೆ. ಆಮ್ಲಜನಕದ ಬೇಡಿಕೆಯು ದಿನಕ್ಕೆ 700 ಟನ್‌ಗಳಷ್ಟು ತೀವ್ರವಾಗಿ ಈಗ 400 ಟನ್‌ಗಳಿಗೆ ಇಳಿದಿದೆ.