Sunday, 13th October 2024

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹಚರ ಬಂಧನ

ಮುಂಬೈ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಸಹಚರ ಪರ್ವೇಜ್‌ ಖಾನ್‌ ಅಲಿಯಾಸ್‌ ಚಿಂಕು ಪಠಾಣ್‌ ಎಂಬಾತನನ್ನು ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್‌) ಬಂಧಿಸಿದೆ. ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.

ಕಳೆದ ತಿಂಗಳು ಪಠಾಣ್‌ ಸಂಬಂಧಿಕ ಡಾನ್‌ ಕರೀಂ ಲಾಲಾ ಎಂಬಾತನನ್ನು ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದರು.

ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಡ್ರಗ್ಸ್‌ ಪ್ರಕರಣದಡಿ ಸೋಹಿಲ್‌ ಸಯ್ಯದ್‌ ಮತ್ತು ಝಿಶಾನ್‌ ಎಂಬವರನ್ನು ಬಂಧಿಸ ಲಾಗಿತ್ತು. ಎನ್‌ಸಿಬಿ ಬಂಧನದಲ್ಲಿದ್ದ ಪಠಾಣ್‌ನನ್ನು ಶನಿವಾರ ಎಟಿಎಸ್‌ ವಶಕ್ಕೆ ಪಡೆದುಕೊಂಡಿದೆ. ಅದೇ ದಿನ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.