Friday, 22nd November 2024

Deepavali 2024: ದೀಪಾವಳಿ ಉತ್ಸವದ ಉತ್ಸಾಹ ಹೆಚ್ಚಿಸುವ 5 ಬಾಲಿವುಡ್ ಸಿನಿಮಾಗಳಿವು; ವಿಡಿಯೊಗಳಿವೆ

Deepavali 2024

ಹಬ್ಬಗಳಿಗೂ ಸಿನಿಮಾಗಳಿಗೂ ತುಂಬಾ ಹತ್ತಿರದ ಸಂಬಂಧವಿದೆ. ಹಲವಾರು ಭಾರತೀಯ ಸಿನಿಮಾಗಳಲ್ಲಿ (Indian cinema) ಹಬ್ಬದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಸದ್ಯಕ್ಕೆ ತುಂಬಾ ಹತ್ತಿರದಲ್ಲಿರುವ ಹಬ್ಬ ದೀಪಾವಳಿ. ಹಲವಾರು ಸಿನಿಮಾಗಳಲ್ಲಿ ದೀಪಾವಳಿ (deepavali) ಹಬ್ಬದ (Deepavali 2024) ಒಂದು ಸಣ್ಣ ಝಲಕ್ ಕಾಣಲು ಸಿಗುತ್ತದೆ. ಈ ಬಾರಿಯ ದೀಪಾವಳಿ ಹಬ್ಬದ ವೇಳೆಗೆ ಉತ್ಸವದ ಉತ್ಸಾಹವನ್ನು ಹೆಚ್ಚಿಸುವ ಬಾಲಿವುಡ್ ನ (bollywood film) ಐದು ಸಿನಿಮಾಗಳಿವೆ.

ಬಾಲಿವುಡ್ ನಲ್ಲಿ ಸಿನಿಮಾಗಳಲ್ಲಿ ಹಬ್ಬದ ಸಂಭ್ರಮವನ್ನು ವಿಶೇಷವಾಗಿ ಸೆರೆ ಹಿಡಿಯಲಾಗುತ್ತದೆ. ದೀಪಗಳ ಹಬ್ಬದ ಸಾರ ಮತ್ತು ಸೌಂದರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾತ್ರ ಸೆರೆಹಿಡಿದ ಸೂಪರ್‌ಹಿಟ್ ಬಾಲಿವುಡ್ ಸಿನಿಮಾಗಳ ಪಟ್ಟಿಇಲ್ಲಿದೆ.

ಕಭಿ ಖುಷಿ ಕಭಿ ಗಮ್

2001ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಕಾಜೋಲ್, ಹೃತಿಕ್ ರೋಷನ್, ಕರೀನಾ ಕಪೂರ್ ನಟಿಸಿದ್ದಾರೆ. ಇದರಲ್ಲಿ ಶಾರುಖ್ ಖಾನ್ ನ ಸಾಂಪ್ರದಾಯಿಕ ಪ್ರವೇಶ ದೃಶ್ಯ ಎಂದಿಗೂ ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ದೀಪಾವಳಿ ಹಬ್ಬದ ಆಚರಣೆ ವೇಳೆ ಮಗನನ್ನು ಸ್ವಾಗತಿಸಲು ಕಾಯುತ್ತಿರುವ ತಾಯಿಯ ದೃಶ್ಯ ಮಗನೊಂದಿಗಿನ ಆಕೆಯ ಭಾವನಾತ್ಮಕ ಸಂಬಂಧವನ್ನು ಒತ್ತಿ ಹೇಳುತ್ತದೆ.

ಹಮ್ ಆಪ್ಕೆ ಹೈ ಕೌನ್

ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 1994 ರ ಬ್ಲಾಕ್‌ಬಸ್ಟರ್ ಸೂಪರ್‌ಹಿಟ್ ಚಿತ್ರವಿದು. ಇದುವರೆಗೆ ಮಾಡಿದ ಅತ್ಯುತ್ತಮ ಉತ್ಸವದ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಸಹೋದರಿಯ ಮಗನ ಹೆಸರನ್ನು ಇಡುವ ಸಂಪ್ರದಾಯವಿದೆ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠದಾನ ಮಾಡಿರುವ ಹಾಡಿಗೆ ಕುಟುಂಬದ ಸದಸ್ಯರೆಲ್ಲರೂ ಸೇರಿ ಕುಣಿಯುತ್ತಾರೆ.

ಚಾಚಿ 420

1997ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿನ ಒಂದು ಪ್ರಮುಖ ದೃಶ್ಯದಲ್ಲಿ ಕಮಲ್ ಹಾಸನ್ ಅವರು ದೀಪಾವಳಿ ದೃಶ್ಯವಿದೆ. ಟಬು, ಅಮರೀಶ್ ಪುರಿ ಮತ್ತು ಓಂ ಪುರಿ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ವಾಸ್ತವ್

1999ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಂಜಯ್ ದತ್, ನಮ್ರತಾ ಶಿರೋಡ್ಕರ್, ಮೊಹ್ನಿಶ್ ಬಹ್ಲ್, ಶಿವಾಜಿ ಸತಮ್ ಮತ್ತು ರೀಮಾ ಲಾಗೂ ನಟಿಸಿದ್ದಾರೆ. ಸಂಜಯ್ ಪಾತ್ರದ ರಘು ತನ್ನ ಕುಟುಂಬವನ್ನು ಭೇಟಿಯಾಗುವ ದೃಶ್ಯವನ್ನು ದೀಪಾವಳಿ ಆಚರಣೆಯ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವನ್ನು ಮಹೇಶ್ ಮಾಂಜ್ರೇಕರ್ ಬರೆದು ನಿರ್ದೇಶಿಸಿದ್ದಾರೆ.

BBK 11: ಇಂದು ಸುದೀಪ್ ಬದಲಿಗೆ ನಿರೂಪಣೆ ಮಾಡಲು ಬರಲಿದ್ದಾರೆ ಈ ಸ್ಟಾರ್: ಯಾರು?

ಮೊಹಬ್ಬತೇನ್

ಆದಿತ್ಯ ಚೋಪ್ರಾ ನಿರ್ದೇಶನದ ಬಾಲಿವುಡ್‌ನ ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ದುರಂತ ಪ್ರೇಮಕಥೆಯನ್ನು ಹೊಂದಿದೆ. ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಉದಯ್ ಚೋಪ್ರಾ, ಜಿಮ್ಮಿ ಶೆರ್ಗಿಲ್ ಮತ್ತು ಜುಗಲ್ ಹಂಸರಾಜ್ ನಟಿಸಿರುವ ಚಿತ್ರದ ಪೈರೋನ್ ಮೇ ಬಂಧನ್ ಹೈ ಹಾಡನ್ನು ದೀಪಾವಳಿ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ.