Wednesday, 23rd October 2024

Deepavali: ದೀಪಾವಳಿ ಆಚರಣೆ ಯಾವಾಗ? ಅಕ್ಟೋಬರ್ 31ರಂದೋ ನವೆಂಬರ್ 1ರಂದೋ?

Deepavali

ದೇಶಾದ್ಯಂತ ನವರಾತ್ರಿ ಹಬ್ಬದೊಂದಿಗೆ (Navratri festival) ದೀಪಾವಳಿ (Deepavali) ಹಬ್ಬದ ಸಂಭ್ರಮವೂ ಶುರುವಾಗಿದೆ. ಈಗಾಗಲೇ ಹಬ್ಬದ ತಯಾರಿ ಆರಂಭಗೊಂಡಿದೆ. ಎಲ್ಲರೂ ವರ್ಷವಿಡೀ ಕುತೂಹಲದಿಂದ ಕಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಪತ್ತಿನ ಒಡೆಯರಾದ ಕುಬೇರ ದೇವರು, ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಲಂಕಾಪತಿ ರಾವಣನನ್ನು ಸೋಲಿಸಿದ ಬಳಿಕ ಭಗವಾನ್ ಶ್ರೀರಾಮ ಅಯೋಧ್ಯೆಗೆ ದೀಪಾವಳಿ ಸಂದರ್ಭದಲ್ಲಿ ಹಿಂದಿರುಗಿದ್ದನ್ನು ಆಚರಿಸಲು ಜನರು ದೀಪ, ಮೇಣದಬತ್ತಿಗಳನ್ನು ಬೆಳಗಿಸಿ ದೀಪೋತ್ಸವವನ್ನು ಆಚರಿಸುತ್ತಾರೆ.

ಈ ಬಾರಿ ದೀಪಾವಳಿ ಯಾವಾಗ?

ದೀಪಾವಳಿ ಸಂದರ್ಭದಲ್ಲಿ ರಾತ್ರಿ ಲಕ್ಷ್ಮೀ ದೇವಿಯನ್ನು ಆರಾಧಿಸುವುದರಿಂದ ಮನೆಗೆ ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ. ಆದರೆ ಈ ವರ್ಷ ಹಬ್ಬದ ನಿಖರವಾದ ದಿನಾಂಕದ ಬಗ್ಗೆ ಕೆಲವು ಗೊಂದಲಗಳಿವೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ದೇವಘರ್ ಮೂಲದ ಖ್ಯಾತ ಜ್ಯೋತಿಷಿ ಪಂಡಿತ್ ನಂದಕಿಶೋರ್ ಮುದ್ಗಲ್ ಅವರು ದೀಪಾವಳಿ ದಿನಾಂಕದ ಗೊಂದಲವನ್ನು ದೂರ ಮಾಡಿದ್ದಾರೆ.

ಪ್ರತಿ ವರ್ಷ ಕಾರ್ತಿಕ ಮಾಸದ ಅಮವಾಸ್ಯೆಯಂದು ದೀಪಾವಳಿ ಆಚರಿಸಲಾಗುತ್ತದೆ. ಈ ವರ್ಷ ಅಮವಾಸ್ಯೆ ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಬರುತ್ತದೆ. ಇದು ಭಕ್ತರಲ್ಲಿ ಅನಿಶ್ಚಿತತೆಯನ್ನು ಉಂಟುಮಾಡಿದೆ. ಅಮವಾಸ್ಯೆ ನವೆಂಬರ್ 1ರವರೆಗೆ ವಿಸ್ತರಿಸಿದರೂ ದೀಪಾವಳಿಯನ್ನು ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ ಎಂದು ಪಂಡಿತ್ ಮುದಗಲ್ ತಿಳಿಸಿದ್ದಾರೆ.

ಕಾರಣವೆಂದರೆ ಅಮವಾಸ್ಯೆಯ ತಿಥಿಯು ಅಕ್ಟೋಬರ್ 31ರಂದು ಮಧ್ಯಾಹ್ನ 3.12 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 1 ರಂದು ಸಂಜೆ 5.14 ಕ್ಕೆ ಕೊನೆಗೊಳ್ಳುತ್ತದೆ. ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಅಮವಾಸ್ಯೆಯ ರಾತ್ರಿ ಆಚರಿಸಲಾಗುತ್ತದೆ. ಹೀಗಾಗಿ ಲಕ್ಷ್ಮೀ ದೇವಿಯ ಆರಾಧನೆಯು ಅಕ್ಟೋಬರ್ 31 ರಂದು ಸಂಜೆಯಿಂದ ತಡರಾತ್ರಿಯವರೆಗೆ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.

Deepavali

ಯಾವಾಗ ಏನು ಆಚರಣೆ?

ದೀಪಾವಳಿ ಹಬ್ಬದ ಮೊದಲ ದಿನವನ್ನು ಗುರುತಿಸುವ ಧನ್ತೇರಾಸ್ ಅಥವಾ ಧನ-ತ್ರಯೋದಶಿಯನ್ನು ಅಕ್ಟೋಬರ್ 29ರಂದು ಆಚರಿಸಲಾಗುತ್ತದೆ. ಇದರ ಪ್ರಕಾರ ದೀಪಾವಳಿ ಆಚರಣೆ ನವೆಂಬರ್ 1ರಂದು ನಡೆಯಬೇಕು. ಆದರೆ ದೀಪಾವಳಿಯನ್ನು ಅಕ್ಟೋಬರ್ 31ರಂದು ಆಚರಿಸಬೇಕಿದೆ. ಯಾಕೆಂದರೆ ಆ ದಿನವೇ ಅಮವಾಸ್ಯೆ ಬರಲಿದೆ. ಲಕ್ಷ್ಮಿ ದೇವಿಯ ಆರಾಧನೆಯು ಸಾಂಪ್ರದಾಯಿಕವಾಗಿ ಅಮವಾಸ್ಯೆಯಂದು ರಾತ್ರಿಯಲ್ಲಿ ನಡೆಯುತ್ತದೆಯಾದ್ದರಿಂದ ದೀಪಾವಳಿ ಆಚರಿಸಲು ಅಕ್ಟೋಬರ್ 31 ಮಂಗಳಕರವೆಂದು ಪರಿಗಣಿಸಲಾಗಿದೆ.

Unique Tradition: ಸಮಾಧಿಯಿಂದ ಶವ ಹೊರತೆಗೆದು ಸತ್ತವರಿಗೆ ಗೌರವ; ಇಂಡೋನೇಷ್ಯಾದಲ್ಲೊಂದು ವಿಚಿತ್ರ ಸಂಪ್ರದಾಯ!

ಧನ್‌ತೇರಾಸ್‌ಗಾಗಿ ಅಕ್ಟೋಬರ್ 29ರಂದು ಬೆಳಗ್ಗೆ 10.31ರವರೆಗೆ ಇರುತ್ತದೆ. ಬಳಿಕ ತ್ರಯೋದಶಿ ಅಕ್ಟೋಬರ್ 30ರಂದು ಮಧ್ಯಾಹ್ನ 1.15ರವರೆಗೆ ಇರುತ್ತದೆ.