Monday, 28th October 2024

Deepvavali 2024: ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸುವ ಬಾಲಿವುಡ್ ಹಾಡುಗಳಿವು; ವಿಡಿಯೊಗಳಿವೆ

Deepvavali 2024

ಸ್ನೇಹಿತರು, ಬಂಧುಗಳು, ಕುಟುಂಬ ಸದಸ್ಯರೆಲ್ಲ ಜೊತೆ ಸೇರಿ ಆಚರಿಸುವ ಹಬ್ಬವೆಂದರೆ ದೀಪಾವಳಿ (Deepvavali 2024). ಈ ಸಂದರ್ಭದಲ್ಲಿ ಸಣ್ಣ, ದೊಡ್ಡ ಪಾರ್ಟಿಗಳನ್ನು ಕೆಲವರು ಆಯೋಜಿಸುತ್ತಾರೆ. ಮನೆಯಲ್ಲಿ ದೀಪಾವಳಿ ಪಾರ್ಟಿ (Deepvavali party) ಆಯೋಜಿಸುವ ಕುರಿತು ಯೋಚಿಸುತ್ತಿದ್ದರೆ ಅದಕ್ಕೆ ಪೂರಕವಾದ ಹಾಡುಗಳ (party song list) ಪಟ್ಟಿಯನ್ನು ಸಿದ್ಧಮಾಡಿಕೊಳ್ಳಿ.

ಅಕ್ಟೋಬರ್ 29ರಿಂದ ಪ್ರಾರಂಭವಾಗುವ ದೀಪಾವಳಿ ಹಬ್ಬದ ಸಂಭ್ರಮ ನವಂಬರ್ 2ರವರೆಗೆ ಇರಲಿದೆ. ಈ ಸಂದರ್ಭದಲ್ಲಿ ಒಂದು ದಿನ ನಾವು ಸ್ನೇಹಿತರು, ಬಂಧುಗಳು, ಮನೆ ಮಂದಿಯ ಜೊತೆ ಸೇರಿ ಪಾರ್ಟಿ ಮಾಡಬಹುದು. ಇದಕ್ಕೆ ಪೂರಕವಾಗಿ ಕೆಲವು ಬಾಲಿವುಡ್ ಹಾಡುಗಳ ಕುರಿತು ಮಾಹಿತಿ ಇಲ್ಲಿದೆ. ಇದನ್ನು ನಿಮ್ಮ ಸಾಂಗ್ ಲಿಸ್ಟ್ ಗೆ ಸೇರಿಸಿಕೊಳ್ಳಿ.

ದಿಲ್ ಧಡಕ್‌‌ನೆ ದೋ ಚಿತ್ರದ ಗಲ್ಲನ್ ಗುಡಿಯಾನ್

ಯಶಿತಾ ಶರ್ಮಾ, ಮನೀಶ್ ಕುಮಾರ್ ಟಿಪ್ಪು, ಫರ್ಹಾನ್ ಅಖ್ತರ್, ಶಂಕರ್ ಮಹಾದೇವನ್, ಸುಖ್ವಿಂದರ್ ಸಿಂಗ್ ಹಾಡಿರುವ ಈ ಹಾಡನ್ನು ಶಂಕಾ-ಎಹ್ಸಾನ್-ಲೋಯ್ ಸಂಯೋಜಿಸಿದ್ದಾರೆ. ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ರಣವೀರ್ ಸಿಂಗ್ ಸೇರಿದಂತೆ ಇತರರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ದೀಪಾವಳಿ ಪಾರ್ಟಿಯನ್ನು ಇದು ಖಂಡಿತಾ ಪರಿಪೂರ್ಣಗೊಳಿಸುತ್ತದೆ.

ಕಭಿ ಖುಷಿ ಕಭಿ ಗಮ್ ಚಿತ್ರದ ಬೋಲೆ ಚೂಡಿಯ

ಬೋಲೆ ಚುಡಿಯ ಬಾಲಿವುಡ್ ಸುಪ್ರಸಿದ್ಧ ನೃತ್ಯ ಗೀತೆಗಳಲ್ಲಿ ಒಂದಾಗಿದೆ. ಫರ್ಹಾ ಖಾನ್ ನೃತ್ಯ ನಿರ್ದೇಶನ ಮಾಡಿದ್ದು, ಈ ಹಾಡಿನಲ್ಲಿ ಕರೀನಾ ಕಪೂರ್, ಹೃತಿಕ್ ರೋಷನ್ ಹಬ್ಬದ ಸಂಭ್ರಮವನ್ನು ಪ್ರಾರಂಭಿಸುತ್ತಾರೆ. ಶಾರುಖ್ ಖಾನ್, ಕಾಜೋಲ್, ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತ್ ಕುಮಾರ್, ಸೋನು ನಿಗಮ್, ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್ ಮತ್ತು ಕವಿತಾ ಕೃಷ್ಣಮೂರ್ತಿ ಹಾಡಿರುವ ಈ ಹಾಡನ್ನು ಜತಿನ್- ಲಲಿತ್ ಸಂಯೋಜಿಸಿದ್ದಾರೆ.

ಖೂಬ್‌ಸುರತ್‌ನಿಂದ ಅಭಿ ತೋ ಪಾರ್ಟಿ ಶುರು ಹುಯಿ

ಎಲ್ಲರಿಗೂ ಎಲ್ಲ ಕಾಲದಲ್ಲೂ ಇಷ್ಟವಾಗುವ ಹಾಡು ಇದಾಗಿದೆ. ಸೋನಮ್ ಕಪೂರ್ ಮತ್ತು ಫವಾದ್ ಖಾನ್ ನಟಿಸಿದ ಖೂಬ್‌ಸೂರತ್ ಚಲನಚಿತ್ರದ ಈ ಹಾಡನ್ನು ಬಾದ್‌ಶಾ ಸಂಯೋಜಿಸಿದ್ದು ಅವರೇ ಇದನ್ನು ಹಾಡಿದ್ದಾರೆ.

ಬಜರಂಗಿ ಭಾಯಿಜಾನ್‌ನಿಂದ ಆಜ್ ಕಿ ಪಾರ್ಟಿ

ಮಿಕಾ ಸಿಂಗ್ ಅವರು ಹಾಡಿರುವ ಈ ಹಾಡನ್ನು ಸುನ್ಬ್ ಮತ್ತು ಪ್ರೀತಮ್ ಅವರು ಸಂಯೋಜಿಸಿದ್ದಾರೆ. ಮದುವೆ, ದೀಪಾವಳಿ ಮತ್ತು ಈದ್ ಸೇರಿದಂತೆ ಎಲ್ಲ ಹಬ್ಬಗಳಿಗೂ ಈ ಹಾಡು ಸರಿಹೊಂದುತ್ತದೆ. ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕರೀನಾ ಕಪೂರ್ ಕಾಣಿಸಿಕೊಂಡಿದ್ದಾರೆ.

ಪದ್ಮಾವತ್ ಚಿತ್ರದ ಘೂಮರ್

ಹೆಚ್ಚು ಸಾಂಪ್ರದಾಯಿಕವಾದ ಈ ಹಾಡು ನೃತ್ಯ ಪಾರ್ಟಿಗೆ ಸೂಕ್ತವಾಗಿದೆ. ದೀಪಿಕಾ ಪಡುಕೋಣೆ ನಟಿಸಿರುವ ಈ ಹಾಡನ್ನು ಶ್ರೇಯಾ ಘೋಷಾಲ್ ಮತ್ತು ಸ್ವರೂಪ್ ಖಾನ್ ಹಾಡಿದ್ದಾರೆ. ಕೃತಿ ಮಹೇಶ್ ಮಿದ್ಯಾ ನೃತ್ಯ ನಿರ್ದೇಶನ ಮಾಡಿದ್ದಾರೆ.

ಬಾರ್ ಬಾರ್ ದೇಖೋದಿಂದ ಕಾಲಾ ಚಶ್ಮಾ

ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಈ ಹಾಡಿನ ಹೈಲೈಟ್ ಕತ್ರಿನಾ ಕೈಫ್. ಕಾಲಾ ಚಶ್ಮಾಗೆ ಪ್ರೇಮ್- ಹರ್ದೀಪ್ ಸಂಗೀತ ನೀಡಿದ್ದಾರೆ ಮತ್ತು ಅಮರ್ ಅರ್ಶಿ, ಬಾದ್‌ಶಾ ಮತ್ತು ನೇಹಾ ಕಕ್ಕರ್ ಹಾಡಿದ್ದಾರೆ.

ಧಡಕ್‌ನಿಂದ ಜಿಂಗಾತ್

ಇಶಾನ್ ಖಟ್ಟರ್ ಮತ್ತು ಜಾನ್ವಿ ಕಪೂರ್ ಅವರ ಆಕರ್ಷಕ ನೃತ್ಯ ಭಂಗಿಗಳು ಈ ಹಾಡಿನಲ್ಲಿದೆ. ಹೆಚ್ಚಿನ ಶಕ್ತಿ ಮತ್ತು ಲವಲವಿಕೆಯನ್ನು ಬೇಡುವ ಈ ಹಾಡು ಪಾರ್ಟಿ ಫೇವರಿಟ್ ಆಗಿದೆ.

Chowkidar Movie: ʼಚೌಕಿದಾರ್ʼ ಚಿತ್ರದಲ್ಲಿ ʼಚೈತ್ರದ ಪ್ರೇಮಾಂಜಲಿʼ ಖ್ಯಾತಿಯ ಶ್ವೇತಾ; 20 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಮೊಹಬ್ಬತೇನ್‌ ಚಿತ್ರದ ಪೈರೋನ್ ಮೇ ಬಂಧನ್ ಹೈ

ಮೊಹಬ್ಬತೇನ್‌ ಚಿತ್ರದ ಪೈರೋನ್ ಮೇ ಬಂಧನ್ ಹೈ ಹಾಡಿಗೆ ಎಲ್ಲರೂ ಹೆಜ್ಜೆ ಹಾಕಬಹುದು. ಉದ್ಭವ್, ಮನೋಹರ್ ಶೆಟ್ಟಿ, ಇಶಾನ್, ಶ್ವೇತಾ ಪಂಡಿತ್, ಸೋನಾಲಿ ಭಟವ್ಡೇಕರ್, ಪೃಥಾ ಮಜುಂದಾರ್ ಹಾಡಿರುವ ಹಾಡನ್ನು ಜತಿನ್- ಲಲಿತ್ ಸಂಯೋಜಿಸಿದ್ದಾರೆ. ಉದಯ್ ಚೋಪ್ರಾ, ಶಮಿತಾ ಶೆಟ್ಟಿ, ಜುಗಲ್ ಹಂಸರಾಜ್, ಕಿಮ್ ಶರ್ಮಾ, ಜಿಮ್ಮಿ ಶೆರ್ಗಿಲ್ ಮತ್ತು ಪ್ರೀತಿ ಜಂಗಿಯಾನಿ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.