ದೆಹಲಿ – ಮುಂಬಯಿ ಎಕ್ಸ್‌ಪ್ರೆಸ್‌ವೇನಲ್ಲಿ (Delhi-Mumbai Expressway) ಗುಂಡಿಗಳಾಗಲು (hole) ಇಲಿಗಳು (rat) ಕಾರಣ ಎಂದು ಹೇಳಿದ ನೌಕರನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಯೋಜನೆಯ ಬಗ್ಗೆ ತಾಂತ್ರಿಕ ತಿಳುವಳಿಕೆ ಇಲ್ಲದ ಕಿರಿಯ ಉದ್ಯೋಗಿಯೊಬ್ಬರು ಈ ಹೇಳಿಕೆ ನೀಡಿದ್ದು, ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಕಂಪನಿ ಹೇಳಿದೆ.
ದೆಹಲಿ – ಮುಂಬಯಿ ಎಕ್ಸ್‌ಪ್ರೆಸ್‌ವೇ ಯೋಜನೆ ಕಾರ್ಯದಲ್ಲಿ ತಾನು ಭಾಗಿಯಾಗಿದ್ದೆ ಎಂದು ಹೇಳಿಕೊಂಡಿದ್ದ ಉದ್ಯೋಗಿಯೊಬ್ಬರು ರಾಜಸ್ಥಾನದ ದೌಸಾ ಜಿಲ್ಲೆಯ ರಸ್ತೆಯ ಭಾಗದಲ್ಲಿ ಇಲಿಗಳ ಗುಹೆಗಳಿವೆ, ಇದರಿಂದಾಗಿ ರಸ್ತೆಯಲ್ಲಿ ಹೊಂಡಗಳಾಗಿವೆ ಎಂದು ಹೇಳಿದ್ದರು.
ನಿರ್ವಹಣಾ ವ್ಯವಸ್ಥಾಪಕ ಎಂದು ಹೇಳಿಕೊಂಡ ಉದ್ಯೋಗಿ ಕೆಸಿಸಿ ಬಿಲ್ಡ್‌ಕಾನ್‌ನ ಕಿರಿಯ ಸಿಬ್ಬಂದಿಯಾಗಿರುವುದಾಗಿ ಸಂಸ್ಥೆಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದೆ.
ಯೋಜನೆಯ ಬಗ್ಗೆ ಯಾವುದೇ ತಾಂತ್ರಿಕ ತಿಳಿವಳಿಕೆ ಹೊಂದಿರದ ಕಿರಿಯ ಉದ್ಯೋಗಿ ಈ ಹೇಳಿಕೆ ನೀಡಿದ್ದಾರೆ. ಅವರನ್ನು ಕಂಪೆನಿಯಿಂದ ವಜಾಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ದೌಸಾದಲ್ಲಿನ ಎಕ್ಸ್‌ಪ್ರೆಸ್‌ವೇ ನೀರು ಸೋರಿಕೆಯಿಂದಾಗಿ ಕುಸಿದಿದೆ ಎಂದು ಯೋಜನಾ ನಿರ್ದೇಶಕ ಬಲ್ವೀರ್ ಯಾದವ್ ಹೇಳಿದ್ದಾರೆ.
ಗುತ್ತಿಗೆದಾರರು ವಿಷಯದ ಬಗ್ಗೆ ಮಾಹಿತಿ ಪಡೆದ ತಕ್ಷಣ ಅವರು ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ಗುಂಡಿಯನ್ನು ಸರಿಪಡಿಸಿದ್ದಾರೆ ಎಂದು ಯಾದವ್ ಹೇಳಿದರು.
ದೆಹಲಿ – ಮುಂಬಯಿ ಎಕ್ಸ್‌ಪ್ರೆಸ್‌ವೇ 1,386 ಕಿಲೋ ಮೀಟರ್ ವ್ಯಾಪಿಸಿದ್ದು, ಇದು ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 24 ಗಂಟೆಗಳಿಂದ 12- 13 ಗಂಟೆಗಳವರೆಗೆ ಕಡಿತಗೊಳಿಸಲಿದೆ. ಈ ಎಕ್ಸ್‌ಪ್ರೆಸ್‌ವೇ ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳನ್ನು ಹಾದು ಹೋಗುತ್ತದೆ.
Forex Reserves : ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ 689.458 ಬಿಲಿಯನ್ ಡಾಲರ್‌ಗೆ ಏರಿಕೆ
ಜುಲೈ 31ರ ವೇಳೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಈ ಹೆದ್ದಾರಿ ಬಗ್ಗೆ ರಾಜ್ಯಸಭೆಗೆ ಮಾಹಿತಿ ನೀಡಿದ್ದು, ಯೋಜನೆಯ ಶೇಕಡಾ 80ರಷ್ಟು ಪೂರ್ಣಗೊಂಡಿದೆ. ಅದು ಸಂಪೂರ್ಣವಾಗಲು ಕನಿಷ್ಠ ಒಂದು ವರ್ಷ ಅಗತ್ಯವಿದೆ ಎಂದು ತಿಳಿಸಿದ್ದರು.