Saturday, 14th December 2024

ಮೂರು ಮಹಾನಗರ ಪಾಲಿಕೆಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಜೈ

ನವದೆಹಲಿ: ನವದೆಹಲಿಯ ಮೂರು ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸುವ ಏಕೀಕರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿ ಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊ ರೇಷನ್ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊ ರೇಷನ್ ಅನ್ನು ವಿಲೀನಗೊಳಿಸು ವುದಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.

ಮುಂದಿನ ವಾರ ದೆಹಲಿ ಮಹಾನಗರ ಪಾಲಿಕೆಗಳ ವಿಲೀನಕ್ಕೆ ಸಂಬಂಧಿಸಿದ ಏಕೀಕರಣ ಮಸೂದೆಯು ಸಂಸತ್ತಿನಲ್ಲಿ ಮಂಡನೆ ಆಗಲಿದೆ. ಮೂರು ಮಹಾನಗರ ಪಾಲಿಕೆಗಳು ವಿಲೀನಗೊಳ್ಳಲಿದ್ದು, ಒಬ್ಬರೇ ಮೇಯರ್ ಆಗಲಿದ್ದಾರೆ.

ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವು ಸುಮಾರು ಎಂಟು ವರ್ಷಗಳಿಂದ ಅಧಿಕಾರ ದಲ್ಲಿದೆ. ಅವರು ಮೂರು ಪಾಲಿಕೆಗಳನ್ನು ವಿಲೀನ ಗೊಳಿಸುವುದೇ ಆಗಿದ್ದರೆ, ಇಷ್ಟು ವರ್ಷಗಳ ಕಾಲ ಅದನ್ನು ಏಕೆ ಮಾಡಲಿಲ್ಲ. ಎಂಸಿಡಿ ಚುನಾವಣೆಯ ದಿನಾಂಕಗಳ ನಿಗದಿತ ಘೋಷಣೆಗೆ ಕೇವಲ ಒಂದು ಗಂಟೆ ಮೊದಲು ಚುನಾವಣಾ ಆಯೋಗಕ್ಕೆ ಏಕೆ ಪತ್ರ ಬರೆಯಬೇಕು? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

“ಮೂರು ಮಹಾನಗರ ಪಾಲಿಕೆಗಳ ಏಕೀಕರಣವನ್ನು ಬಹಳ ಹಿಂದೆಯೇ ಮಾಡಬಹುದಾಗಿತ್ತು. ಯಾವಾಗ ಬೇಕಿದ್ದರೂ ಮಾಡಬಹುದಿತ್ತು. ಆದರೆ ಇದು ಮಹಾನಗರ ಪಾಲಿಕೆಗಳ ಚುನಾವಣೆಯನ್ನು ವಿಳಂಬಗೊಳಿಸುವ ತಂತ್ರ. ದೆಹಲಿಯ ನಾಗರಿಕ ಚುನಾವಣೆಯಲ್ಲಿ ಬಿಜೆಪಿಯು ಸೋಲುವ ಭಯದಲ್ಲಿದೆ ಎಂದು ಆಮ್ ಆದ್ಮಿ ಪಕ್ಷ ದೂಷಿಸಿದೆ.