ನವದೆಹಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿಸಿದ ಹಿನ್ನೆಲೆಯಲ್ಲಿ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಧಿವೇಶದಿಂದ ಅಮಾನತು ಮಾಡಲಾಗಿದೆ.
ತೃಣಮೂಲದ ಡೆರೆಕ್ ಒ’ಬ್ರಿಯಾನ್ ಅವರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸದನದ ಅಧ್ಯಕ್ಷ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನ್ಖರ್ ಅವರು ಘೋಷಿಸಿದ್ದಾರೆ.
ಡೆರೆಕ್ ಒ’ಬ್ರಿಯಾನ್ ಅವರು ದೆಹಲಿ ಸೇವೆಗಳ ಮಸೂದೆಯ ಮೇಲಿನ ಬಿಸಿಬಿಸಿ ಚರ್ಚೆಯ ಸಂದರ್ಭದಲ್ಲಿ ಪ್ರಚಾರವನ್ನು ಪಡೆಯಲು ಸದನದಲ್ಲಿ “ನಾಟಕ” ಮಾಡುತ್ತಿದ್ದಾರೆ ಎಂದು ಸೋಮವಾರ ಧನ್ಖರ್ ಆರೋಪಿಸಿ ದ್ದರು. ಟಿಎಂಸಿ ಸದಸ್ಯ ಒ’ಬ್ರಿಯಾನ್ ತಮ್ಮ ಭಾಷಣವನ್ನು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ, 2023 ಕ್ಕೆ ಸೀಮಿತಗೊಳಿಸಲು ನಿರಾಕರಿಸಿ ಕೇಂದ್ರ ಸರಕಾರದ ವಿರುದ್ಧ ಆರೋಪ ಗಳನ್ನು ಮಾಡಿದ ನಂತರ ಧನ್ಖರ್ ಆಕ್ರೋಶಗೊಂಡಿದ್ದರು.
ಪಿಯೂಷ್ ಗೋಯಲ್ ಅವರು ಸದನದ ಕಲಾಪಗಳಿಗೆ ನಿರಂತರವಾಗಿ ತೊಂದರೆ ನೀಡಿದ್ದಕ್ಕಾಗಿ, ಸಭಾಪತಿಗೆ ಅವಿಧೇಯತೆ ಮತ್ತು ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದರು.