ಸಮೋಸ, ಪಕೋಡ, ಚಿಪ್ಸ್ ಪ್ರಿಯರು ನೀವಾಗಿದ್ದರೆ ಇದರ ಸೇವನೆಗೆ ಈಗಲೇ ಕಡಿವಾಣ ಹಾಕಿಕೊಳ್ಳಿ. ಇಲ್ಲವಾದರೆ ಮಧುಮೇಹ (Diabetes Risk) ಬರುವ ಅಪಾಯವಿದೆ. ಕರಿದ ಆಹಾರಗಳು ಭಾರತೀಯರಲ್ಲಿ ಮಧುಮೇಹಕ್ಕೆ (Diabetes) ಕಾರಣವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಧ್ಯಯನ ವರದಿ ತಿಳಿಸಿದೆ. ಕರಿದ ಆಹಾರಗಳ ಸೇವನೆಯು ಉರಿಯೂತಕ್ಕೆ ಕಾರಣವಾಗುತ್ತದೆ ಎಂಬುದನ್ನು ಅಧ್ಯಯನ ವರದಿ ಬಹಿರಂಗಪಡಿಸಿದೆ. ಇದು ಮಧುಮೇಹಕ್ಕೆ ಮುಖ್ಯ ಕಾರಣವಾಗಿರುತ್ತದೆ.
ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಡೆಸಿದ 2023ರ ಅಧ್ಯಯನವು ಭಾರತದಲ್ಲಿ ಸುಮಾರು 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಇನ್ನೂ 136 ಮಿಲಿಯನ್ ಜನರು ಪೂರ್ವ ಮಧುಮೇಹ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ.
ಈ ಅಧ್ಯಯನದ ಮೊದಲು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಅಂದಾಜು ಸಂಖ್ಯೆ 77 ಮಿಲಿಯನ್ ಆಗಿತ್ತು. ಮಧುಮೇಹವು ಚಯಾಪಚಯ ಕಾಯಿಲೆಯಾಗಿದ್ದು ಇದು ದೇಹದಲ್ಲಿ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಮಧುಮೇಹವು ವಂಶ ಪಾರಂಪರ್ಯವಾಗಿ ಅಥವಾ ಜೀವನಶೈಲಿಯಿಂದ ಬರುತ್ತದೆ.
ಇತ್ತೀಚಿನ ಅಧ್ಯಯನದ ಪ್ರಕಾರ ಚಿಪ್ಸ್, ಫ್ರೈ ಡ್ ಚಿಕನ್, ಸಮೋಸಾ, ಪಕೋಡ, ಕುಕ್ಕೀಸ್, ಕೇಕ್, ಮಯೋನಿಸ್, ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದ ಮಾಂಸ, ಒಣ ಬೀಜಗಳು, ಹುರಿದ ವಾಲ್ನಟ್ಸ್ ಮತ್ತು ಸೂರ್ಯಕಾಂತಿ ಬೀಜಗಳು ಮಧುಮೇಹದ ಅಪಾಯ ಹೆಚ್ಚಿಸುತ್ತವೆ ಎನ್ನುತ್ತಾರೆ ಸಂಶೋಧಕರು.
ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ ಮತ್ತು ಐಸಿಎಂಆರ್ ನಡೆಸಿದ ಅಧ್ಯಯನದ ಪ್ರಕಾರ ಏಜ್ ಡಯೆಟ್ (Advanced glycation and product) ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಯಾವುದರಿಂದ ಅಪಾಯ ಹೆಚ್ಚು
ದೀರ್ಘ ಕಾಲ ಸಂರಕ್ಷಿಸಿ ಇಡಬಹುದಾದ ಕರಿದ ತಿಂಡಿಗಳು, ಬೇಕ್ ಮಾಡಿರುವ ತಿನಿಸುಗಳು, ಸಂಸ್ಕರಿಸಿದ ಆಹಾರ, ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದ ಮಾಂಸಗಳು, ಹುರಿದ ಬೀಜಗಳು ಕೂಡ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಭಾರತದಲ್ಲಿ ದೀರ್ಘ ಕಾಲ ಸಂರಕ್ಷಿಸಿ ಇಡಬಹುದಾದ ಆಹಾರವನ್ನು ತಯಾರಿಸುವಾಗ ಸಾಮಾನ್ಯವಾಗಿ ಹುರಿಯುವುದು, ಗ್ರಿಲ್ಲಿಂಗ್ ಮತ್ತು ಬೇಕಿಂಗ್‌ನಂತಹ ಅಡುಗೆ ವಿಧಾನಗಳನ್ನು ಬಳಸಲಾಗುತ್ತದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಸಂಶೋಧನಾಕಾರರು.
Kiss Away The Calories: ಕಿಸ್ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಂತೆ!
ಯಾವುದರಿಂದ ಅಪಾಯ ಕಡಿಮೆ
ಕಡಿಮೆ ಆಯುಷ್ಯ ಹೊಂದಿರುವ ಹಣ್ಣು, ತರಕಾರಿ, ಧಾನ್ಯ ಮತ್ತು ಕಡಿಮೆ ಕೊಬ್ಬಿನ ಹಾಲುಗಳಂತಹ ಆಹಾರಗಳು ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವವರಿಗೆ ತಮ್ಮ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎನ್ನುತ್ತಾರೆ ಸಂಶೋಧಕರು.
ಆಹಾರವನ್ನು ಕುದಿಸುವುದು ಮತ್ತು ಆವಿಯಲ್ಲಿ ಬೇಯಿಸುವುದು ಹಾನಿಕಾರಕ ಸಂಯುಕ್ತಗಳನ್ನು ಆಹಾರದಲ್ಲಿ ನಿಯಂತ್ರಿಸುತ್ತದೆ. ಇದರಿಂದ ಅಪಾಯವಿಲ್ಲ.