Tuesday, 7th January 2025

Digital Arrest: ‘ಡಿಜಿಟಲ್ ಅರೆಸ್ಟ್’ ಜಾಲಕ್ಕೆ ಯೂಟ್ಯೂಬರ್ ಟ್ರ್ಯಾಪ್‌! 40 ಗಂಟೆಗಳ ಕಾಲ ಬಂಧಿಯಾಗಿದ್ದು ಹೇಗೆ?

ಮುಂಬೈ: ದಿನಕ್ಕೊಂದರಂತೆ ಡಿಜಿಟಲ್ ಫ್ರಾಡ್ (Digital Fraud) ಪ್ರಕರಣಗಳು ವರದಿಯಾಗುತ್ತಲೇ ಇರುವಂತೆ, ಜನಪ್ರಿಯ ಯೂಟ್ಯೂಬರ್ (YouTuber) ಮತ್ತು ಇನ್ ಸ್ಟಾಗ್ರಾಂ (Instagram) ಇನ್ ಫ್ಲ್ಯುವೆನ್ಸರ್ ಅಂಕುಶ್ ಬಹುಗುಣ ತಮಗಾದ ಆನ್ ಲೈನ್ ಫ್ರಾಡ್ (Online Fraud) ಹಾಗೂ ಡಿಜಿಟಲ್ ಅರೆಸ್ಟ್ (Digital Arrest) ಅನುಭವದ ಕುರಿತಾಗಿ ವಿವರಗಳನ್ನು ಬಹಿರಂಗಗೊಳಿಸಿದ್ದು ಇದೀಗ ಅವರ ಪೋಸ್ಟ್ ಎಲ್ಲೆಡೆ ವೈರಲ್ (Viral Video) ಆಗುತ್ತಿದೆ.

ಅಂಕುಶ್ ಬಹುಗುಣ ಅವರು ಇತ್ತೀಚೆಗಷ್ಟೇ ಈ ಡಿಜಿಟಲ್ ಫ್ರಾಡರ್ ಗಳ ಬಲೆಗೆ ಬಿದ್ದಿದ್ದು, ಸುಮಾರು 40 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಗೆ ಒಳಗಾಗಿದ್ದರು ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ ಹಾಗೂ ಇಂತಹ ಫ್ರಾಡ್‌ಗಳ ಕುರಿತಾಗಿ ತನ್ನ ಫಾಲೋವರ್ಸ್ ಎಚ್ಚರಿಕೆಯಿಂದಿರುವಂತೆ ಅವರು ತನ್ನ ಈ ಪೋಸ್ಟ್ ನಲ್ಲಿ ವಿನಂತಿಸಿಕೊಂಡಿದ್ದಾರೆ.

‘ಅಂತರಾಷ್ಟ್ರೀಯ ಸಂಖ್ಯೆಯಿಂದ ಬಂದ ಕರೆಯೊಂದರ ಮೂಲಕ ಈ ಎಲ್ಲಾ ನಾಟಕ ಶುರುವಾಯ್ತು. +1 ಸಂಖ್ಯೆಯಿಂದ ಬಂದ ಕರೆಯು, ನನ್ನ ಕೊರಿಯರ್ ಡೆಲಿವರಿ ಒಂದು ಕ್ಯಾನ್ಸಲ್ ಆಗಿದೆ ಎಂದು ತಿಳಿಸಿತು, ಈ ಸಂದರ್ಭದಲ್ಲಿ ಅದರಲ್ಲಿ ಸೂಚಿಸಿದಂತೆ ನಾನು ‘0’ ಸಂಖ್ಯೆಯನ್ನು ಒತ್ತಿ ನಾನು ದೊಡ್ಡ ತಪ್ಪು ಮಾಡಿದೆ’ ಎಂದು ಬಹುಗುಣ ತನಗಾದ ವಂಚನೆಯ ಬಗ್ಗೆ ವಿವರವಾಗಿ ಬಿಚ್ಚಿಟ್ಟಿದ್ದಾರೆ.

ಕರೆ ಮಾಡಿದ ಸ್ಕ್ಯಾಮರ್ ವ್ಯಕ್ತಿ ಹೇಳಿದಂತೆ, ಅಂಕುಶ್ ಕಾನೂನು ಬಾಹಿರವಾಗಿ ಚೀನಾಕ್ಕೊಂದು ಪಾರ್ಸೆಲ್ ಕಳಿಸಿದ್ದಾರೆ ಮತ್ತು ಇವರ ಆಧಾರ್ ಸಂಖ್ಯೆಯನ್ನು ನಮೂದಿಸಿ ಈ ಪಾರ್ಸೆಲ್ ರವಾನೆಯಾಗಿದೆ ಮತ್ತು ಈ ವಿಚಾರ ಇದೀಗ ಕಸ್ಟಮ್ ಅವರ ಗಮನಕ್ಕೆ ಬಂದಿದ್ದು, ನಿಮ್ಮ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ ಎಂದು ಸ್ಕ್ಯಾಮರ್ ಹೇಳುತ್ತಾನೆ. ಮತ್ತು ಬಳಿಕ ಈ ಕರೆಯನ್ನು ವಾಟ್ಸ್ಯಾಪ್ ಮೂಲಕ ಪೊಲೀಸ್ ಅಧಿಕಾರಿಗೆ ಡೈವರ್ಟ್ ಮಾಡುವುದಾಗಿ ಹೇಳುತ್ತಾನೆ.

ಇನ್ನೂ ಮುಂದುವರಿದು ಆ ಸ್ಕ್ಯಾಮರ್ ಅಂಕುಶ್ ವಿರುದ್ಧ ಗಂಭೀರ ಅಪರಾಧ ಆರೊಪವನ್ನು ಹೊರಿಸುತ್ತಾನೆ. ಇದರಲ್ಲಿ, ಮನಿ ಲಾಂಡ್ರಿಂಗ್, ಮಾದಕ ದ್ರವ್ಯ ಸಾಗಾಟ ಮೊದಲಾದ ಗಂಭೀರ ಆರೋಪಗಳನ್ನು ಆಧಾರಗಳ ಸಹಿತ ವಿವರಿಸುತ್ತಾನೆ. ಮತ್ತು ಇದರಿಂದ ನಿಮ್ಮ ಕುಟುಂಬಕ್ಕೂ ಅಪಾಯವಿದೆ ಎಂಬ ಅರ್ಥದಲ್ಲಿ ಮಾತನಾಡುತ್ತಾನೆ.

ಈ ಸುದ್ದಿಯನ್ನೂ ಓದಿ: Viral Video: ಬರೋಬ್ಬರಿ 600 ಕೆ.ಜಿ ತೂಕದ ಖಡ್ಗಮೃಗ ಹೆಗಲ ಮೇಲೆ ಹೊತ್ತು ಸಾಗಿದ ಅರಣ್ಯಾಧಿಕಾರಿಗಳು- ವಿಡಿಯೊ ನೋಡಿ

‘ನಾನು ಅಮಾಯಕ ಎಂದು ತಿಳಿದಿದ್ದರೂ, ಅವರು ಅನುಸರಿದ ತಂತ್ರಗಳು ನನ್ನನ್ನು ಒಮ್ಮೆಗ ಕಂಗಾಲಾಗುವಂತೆ ಮಾಡಿತು. ನನ್ನ ಫೇಸ್ ಡಿಟೆಕ್ಷನ್, ಹಿಂಸೆ ಮತ್ತು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎಂದು ನನ್ನನ್ನು ಪದೇ ಪದೇ ಬೆದರಿಸಲಾಯಿತು’ ಎಂದು ಅಂಕುಶ್ ತಮಗಾದ ಘೋರ ಅನುಭವವನ್ನು ಹೇಳಿಕೊಂಡಿದ್ದಾರೆ.

‘ಸೆಲ್ಫ್ ಕಸ್ಟಡಿ’ ಸ್ಥಿತಿಯಲ್ಲಿರಬೇಕಾದ ಅನಿವಾರ್ಯತೆಯನ್ನು ಹೇಳಿಕೊಂಡ ಅಂಕುಶ್, ವಂಚಕರು ತನ್ನನ್ನು 40 ಗಂಟೆಗಳವರೆಗೆ ಏಕಾಂಗಿಯಾಗಿರಿಸಿ ಡಿಜಿಟಲ್ ಅರೆಸ್ಟ್ ಸ್ಥಿತಿಯಲ್ಲಿರಿಸಿದ್ದರು ಎಂದು ಹೇಳಿದ್ದಾರೆ. ಈ 40 ಗಂಟೆಗಳ ಅವಧಿಯಲ್ಲಿ ವಂಚಕರು, ತಾನು ವಿಡಿಯೋ ಕರೆ ಮತ್ತು ಇತರೇ ಯಾವುದೇ ಮಾದರಿಯಲ್ಲಿ ಸಂಪರ್ಕಿಸದಂತೆ ಚಕ್ರವ್ಯೂಹದಲ್ಲಿರಿಸಿದ್ದರು’ ಎಂದು ಅಂಕುಶ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *