Saturday, 23rd November 2024

ದಿಗ್ವಿಜಯ ಸಿಂಗ್‌’ಗೆ ಕರೋನಾ ಸೋಂಕು ದೃಢ

ನವದೆಹಲಿ: ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಮಧ್ಯಪ್ರದೇಶದ ಮಾಜಿ ಸಿಎಂ ಸಿಂಗ್ ಪ್ರಸ್ತುತ ಅವರ ದೆಹಲಿ ನಿವಾಸದಲ್ಲಿದ್ದಾರೆ.

ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ನಾನು ಪ್ರಸ್ತುತ ನನ್ನ ದೆಹಲಿ ನಿವಾಸದಲ್ಲಿದ್ದೇನೆ ಎಂದು ಮಧ್ಯಪ್ರದೇಶದ ರಾಜ್ಯಸಭಾ ಸಂಸದ ಟ್ವೀಟ್ ಮಾಡಿದ್ದಾರೆ. ಅವರ ಸಂಪರ್ಕಕ್ಕೆ ಬಂದವರೆಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳು ವಂತೆ ಒತ್ತಾಯಿಸಿದ್ದಾರೆ.

ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರಿಗೆ ಕೊರೋನಾ ದೃಢವಾಗಿತ್ತು.