Wednesday, 1st January 2025

Dileep Shankar: ಮಲಯಾಳಂ ನಟ ದಿಲೀಪ್‌ ಶಂಕರ್‌ ನಿಗೂಢ ಸಾವು-ಆತ್ಮಹತ್ಯೆ ಶಂಕೆ

Malayalam Actor death

ತಿರುವನಂತಪುರಂ : ಮಲಯಾಳಂ ಚಿತ್ರನಟ ಹಾಗೂ ಮತ್ತು ಕಿರುತೆರೆ ನಟ (Malayalam Actor death) ದಿಲೀಪ್ ಶಂಕರ್ (Dileep Shankar) ಭಾನುವಾರ ತಿರುವನಂತಪುರಂನ ವ್ಯಾನ್‌ರಾಸ್ ಜಂಕ್ಷನ್ ಬಳಿಯ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ದಿಲೀಪ್ ಶಂಕರ್ ಮೃತ ಪಟ್ಟಿರುವುದನ್ನು ನೋಡಿದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.  ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭ ಮಾಡಿದ್ದಾರೆ.

ನಾಲ್ಕು ದಿನಗಳ ಹಿಂದೆ ಪಂಚಾಗ್ನಿ ಎಂಬ ಟಿವಿ ಕಾರ್ಯಕ್ರಮದ ಚಿತ್ರೀಕರಣದ ವೇಳೆ ದಿಲೀಪ್ ತಿರುವನಂತಪುರಂನಲ್ಲಿರುವ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು ಎಂದು ಹೇಳಲಾಗಿದೆ. ಎರಡು ದಿನಗಳಿಂದ ಕೊಠಡಿಯಿಂದ ಹೊರ ಬಂದಿರಲಿಲ್ಲ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಕೊಠಡಿಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಕೊಠಡಿಗೆ ನುಗ್ಗಿ ನೋಡಿದಾಗ ಆತನ ಶವ ಪತ್ತೆಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

ಫೋರೆನ್ಸಿಕ್ ತಂಡವು ಕೊಠಡಿಯನ್ನು ಪರಿಶೀಲಿಸಿದ್ದು, ಹೆಚ್ಚಿನ ವಿವರಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿವೆ. ಎರಡು ದಿನಗಳಿಂದ ನಟ ಯಾರ ಫೋನ್‌ ಕರೆಗೆ ಉತ್ತರಿಸಿಲ್ಲ ಎಂದು ತಿಳಿದು ಬಂದಿದೆ.

ಯಾರು ದಿಲೀಪ್ ಶಂಕರ್?

ದಿಲೀಪ್‌ ಮಲಯಾಳಂನ ಕೆಲ ಚಲನಚಿತ್ರ ಹಾಗೂ ಟಿವಿ ಶೋ ಮೂಲಕ ಪರಿಚಿತರಾಗಿದ್ದರು . ಮಲಯಾಳಂನ ಅಮ್ಮಾರಿಯಾತೆ, ಸುಂದರಿ ಮತ್ತು ಪಂಚಾಗ್ನಿಯಂತಹ ಹಿಟ್ ಟಿವಿ ಶೋಗಳಲ್ಲಿ ಪಾತ್ರಗಳಿಂದ ಹೆಸರುವಾಸಿಯಾಗಿದ್ದರು. ಅವರು 2011 ರಲ್ಲಿ ಚಾಪ್ಪಾ ಕುರಿಶ್ ಮತ್ತು 2013 ರಲ್ಲಿ ಉತ್ತರ 24 ಚಿತ್ರಗಳಲ್ಲಿ ನಟಿಸಿದ್ದಾರೆ.

ಅವರ ಸಾವಿನ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳ ನಂತರ, ನಟಿ ಸೀಮಾ ಜಿ ನಾಯರ್ ಅವರು ಮಲಯಾಳಂನಲ್ಲಿ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ. “ನೀವು ಐದು ದಿನಗಳ ಹಿಂದೆ ನನಗೆ ಕರೆ ಮಾಡಿದ್ದೀರಿ ಮತ್ತು ಆ ದಿನ ನನಗೆ ತಲೆನೋವು ಇದ್ದ ಕಾರಣ ನಾನು ಮಾತನಾಡಲು ಸಾಧ್ಯವಾಗಲಿಲ್ಲ. ಈಗ ಪತ್ರಕರ್ತರೊಬ್ಬರು ಕರೆ ಮಾಡಿದಾಗ ಸುದ್ದಿ ತಿಳಿಯಿತು. ನಿನಗೇನಾಯಿತು ದಿಲೀಪ್…ಯಾಕೆ ಹೀಗಾಯಿತು ದೇವರೇ, ಏನು ಬರೆಯಬೇಕೆಂದು ನನಗೂ ತಿಳಿಯುತ್ತಿಲ್ಲ. ನಿಮಗೆ ನನ್ನ ನಮನಗಳು ಎಂದು ಹೇಳಿದ್ದಾರೆ.

ಇತ್ತೀಚೆಗೆ ಖ್ಯಾತ ಚಲನಚಿತ್ರ ಎಡಿ‌ಟರ್ ನಿಶಾದ್ ಯೂಸುಫ್(Nishadh Yusuf) ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ನಿಶಾದ್ ಯೂಸುಫ್ ದಕ್ಷಿಣ ಭಾರತದ ಖ್ಯಾತ ಚಿತ್ರ ಸಂಕಲನಕಾರರಾಗಿದ್ದರು. 2022 ರಲ್ಲಿ ಯೂಸುಫ್ ಕೇರಳ ರಾಜ್ಯ ನೀಡುವ ಅತ್ಯುತ್ತಮ ಚಲನಚಿತ್ರ ಎಡಿಟರ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಸೂರ್ಯ ಅಭಿನಯದ ಕಂಗುವ ( Kanguva) ಚಿತ್ರದ ಎಡಿಟರ್‌ ಆಗಿ ಕೆಲಸ ಮಾಡಿದ್ದರು.

ಈ ಸುದ್ದಿಯನ್ನೂ ಓದಿ : ಕೇರಳದ ನಟ ಶರತ್ ಚಂದ್ರನ್ ಶವವಾಗಿ ಪತ್ತೆ