Saturday, 23rd November 2024

ಎನ್‌ಐಎ(NIA) ಡಿಜಿಪಿಯಾಗಿ ದಿನಕರ್ ಗುಪ್ತಾ ನೇಮಕ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾರನ್ನು ನ್ಯಾಷನಲ್ ಇನ್ವೆಸ್ಟಿ ಗೇಷನ್ ಏಜೆನ್ಸಿ(NIA)ಯ ಮಹಾ ನಿರ್ದೇಶಕ (ಡಿಜಿಪಿ) ರಾಗಿ ನೇಮಿಸಲಾಗಿದೆ.

1987ರ ಬ್ಯಾಚ್ ಇಂಡಿಯನ್ ಪೊಲೀಸ್ ಸರ್ವೀಸ್ (ಐಪಿಎಸ್) ಅಧಿಕಾರಿಯಾಗಿರುವ ಗುಪ್ತಾ ಅವರು ಪಂಜಾಬ್ ಕೇಡರ್ ನ ಐಪಿಎಸ್ ಅಧಿಕಾರಿ. ಹಿರಿಯ ಅಧಿಕಾರಿ ದಿನಕರ್ ಗುಪ್ತಾರನ್ನು ಎನ್‌ಐಎ ಡಿಜಿಪಿಯಾಗಿ ನೇಮಿಸಲು ಕೇಂದ್ರ ಸರ್ಕಾರ ಗುರುವಾರ ಸಮ್ಮತಿ ಸಿದೆ.

ಮಾರ್ಚ್ 31, 2024 ರವರೆಗೆ ಎನ್‌ಐಎ ಮಹಾನಿರ್ದೇಶಕರಾಗಿ ಗುಪ್ತಾ ಅವರ ನೇಮ ಕಾತಿಯನ್ನು ಸಂಪುಟದ ನೇಮಕಾತಿ ಸಮಿತಿ ಅನುಮೋದಿಸಿದೆ, ಅದು ಅವರ ನಿವೃತ್ತಿಯ ದಿನಾಂಕವಾಗಿದೆ” ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರವು ಸ್ವಗರ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ಆಗಿ ನೇಮಿಸಿದೆ.

ದಾಸ್, ಛತ್ತೀಸ್‌ಗಢ ಕೇಡರ್‌ನ 1987-ಬ್ಯಾಚ್‌ನ IPS ಅಧಿಕಾರಿ, ಪ್ರಸ್ತುತ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ವಿಶೇಷ ನಿರ್ದೇಶಕರಾಗಿದ್ದಾರೆ.