Friday, 20th September 2024

ಡಿಸ್ನಿಯಿಂದಲೂ 7000 ಉದ್ಯೋಗಿಗಳ ವಜಾ

ನವದೆಹಲಿ: ಆರ್ಥಿಕ ಹಿಂಜರಿತದ ಬಿಸಿ ಮನೊರಂಜನಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ದೈತ್ಯ ನಿರ್ಮಾಣ ಸಂಸ್ಥೆ ತನ್ನ 7000 ಸಿಬ್ಬಂದಿ ಯನ್ನು ಏಕಾ-ಏಕಿ ವಜಾ ಮಾಡಿದೆ.

ಡಿಸ್ನಿ, ಆರ್ಥಿಕ ಹಿಂಜರಿತದ ಕಾರಣದಿಂದಾಗಿ ನಷ್ಟದ ಕಡೆಗೆ ಜಾರುತ್ತಿದ್ದು ಇದೇ ಕಾರಣಕ್ಕೆ 7000 ಉದ್ಯೋಗಿಗಳನ್ನು ವಜಾ ಮಾಡಿದೆ. ಈ ವಿಷಯವನ್ನು ಸಂಸ್ಥೆಯ ಸಿಇಓ ಆಗಿ ಪುನಃ ಅಧಿಕಾರ ವಹಿಸಿಕೊಂಡಿರುವ ಬಾಬ್ ಇಗರ್ ಹೇಳಿದ್ದಾರೆ. ತಾವು ಈ ನಿರ್ಧಾರವನ್ನು ಬಹಳ ಕಷ್ಟದಿಂದ ತೆಗೆದುಕೊಂಡಿರುವುದಾಗಿಯೂ ಹೇಳಿದ್ದಾರೆ.

ವಿಶ್ವದಾದ್ಯಂತ ಡಿಸ್ನಿಗಾಗಿ 1.90 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 80% ಸಿಬ್ಬಂದಿ ಪೂರ್ಣಪ್ರಮಾಣದ ಡಿಸ್ನಿ ಸಿಬ್ಬಂದಿ ಇನ್ನುಳಿದವರು ಅರೆಕಾಲಿಕ. ಇದರಲ್ಲಿ 7000 ಮಂದಿ ಇದೀಗ ಉದ್ಯೋಗ ಕಳೆದುಕೊಂಡಿದ್ದಾರೆ.

ಡಿಸ್ನಿಯ ಟಿವಿ ಉದ್ಯಮ ನಿಧಾನಕ್ಕೆ ಇಳಿಮುಖ ಕಾಣುತ್ತಿದೆ, ಇನ್ನು ಒಟಿಟಿ ಬ್ಯುಸಿನೆಸ್‌ ನಷ್ಟದಾಯಕವಾಗಿದೆ.

ಎರಡು ದಶಕ ಕಾಲ ಡಿಸ್ನಿಯ ಸಿಇಓ ಆಗಿದ್ದ ಬಾಬ್‌ 2020 ರಲ್ಲಿ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಇದೀಗ ಮತ್ತೆ ಅವರನ್ನೇ ಸಿಇಓ ಮಾಡಲಾಗಿದ್ದು, ಡಿಸ್ನಿಯನ್ನು ಮತ್ತೆ ಮೇಲೆತ್ತುವ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಲಾಗಿದೆ.