Monday, 16th September 2024

ಡಿಎಂಕೆ ಪದಾಧಿಕಾರಿ ಸಿ. ಸೆಲ್ವಂ ಹತ್ಯೆ

ಚೆನ್ನೈ: ಮಂಗಳವಾರ ರಾತ್ರಿ ಚೆನ್ನೈನ ಮಡಿಪಕ್ಕಂ ಪ್ರದೇಶದಲ್ಲಿ ಡಿಎಂಕೆ ಪದಾಧಿಕಾರಿ ಸಿ. ಸೆಲ್ವಂ ಅವರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆಗೈದಿದ್ದಾರೆ.

ಸೆಲ್ವಂ (46) ಡಿಎಂಕೆಯ 186 ನೇ ವಾರ್ಡ್ ಘಟಕದ ಕಾರ್ಯದರ್ಶಿ ಆಗಿದ್ದರು ಎಂದು ತಿಳಿದುಬಂದಿದೆ.

ಸೆಲ್ವಂ ಅವರನ್ನು ಮಡಿಪಕ್ಕಂನಲ್ಲಿರುವ ಅವರ ನಿವಾಸದ ಹೊರಗೆ ಜನರ ಎದುರೇ ಗ್ಯಾಂಗ್ ಕೊಂದಿದೆ ಎಂದು ಹೇಳಲಾಗಿದೆ. ಸೆಲ್ವಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಡಿಪಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದಾಳಿಕೋರರನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದು, ಭೀಕರ ಹತ್ಯೆಯ ಹಿಂದಿನ ಉದ್ದೇಶ ವನ್ನು ಪತ್ತೆ ಹಚ್ಚುತ್ತಿದ್ದಾರೆ.

ಸೆಲ್ವಂ, ಈ ವಾರ ಕೊಲೆಯಾದ ಎರಡನೇ ಡಿಎಂಕೆ ಸ್ಥಳೀಯ ಪದಾಧಿಕಾರಿಯಾಗಿದ್ದಾರೆ. ತಿರುನೆಲ್ವೇಲಿಯಲ್ಲಿ ಪೊನ್ನುದಾಸ್ (38) ಅವರನ್ನು ಹತ್ಯೆ ಮಾಡಲಾಗಿದೆ.