ವಾಷಿಂಗ್ಟನ್: ಅಮೆರಿಕ ನೂತನ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್(Donald Trump) ಟೆಸ್ಲಾ ಸಿಇಒ ಎಲಾನ್ ಮಸ್ಕ್(Elon Musk) ಮತ್ತು ಭಾರತ ಮೂಲದ ವಿವೇಕ್ ರಾಮಸ್ವಾಮಿ(Vivek Ramaswamy) ಅವರಿಗೆ ತಮ್ಮ ಸಚಿವ ಸಂಪುಟದಲ್ಲಿ ಮಹತ್ವ ಹುದ್ದೆ ನೀಡಿದ್ದಾರೆ. ಎಲಾನ್ ಮಸ್ಕ್ ಮತ್ತು ವಿವೇಕ್ ಟ್ರಂಪ್ ಅವರ ಹೊಸ ‘ಸರ್ಕಾರಿ ದಕ್ಷತೆಯ ಇಲಾಖೆ’ (DOGE) ನೇತೃತ್ವ ವಹಿಸಲಿದ್ದಾರೆ. ಆಡಳಿತದಲ್ಲಿ ಸುಧಾರಣೆ ಮತ್ತು ದಕ್ಷತೆ ಕಾಪಾಡುವ ನಿಟ್ಟಿನಲ್ಲಿ ಈ ಹೊಸ ಇಲಾಖೆ ರಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಬಗೆ ಸ್ವತಃ ಟ್ರಂಪ್ ಘೋಷಿಸಿದ್ದು, ಅಮೆರಿಕದ ದೇಶಪ್ರೇಮಿ ವಿವೇಕ್ ರಾಮಸ್ವಾಮಿ ಅವರೊಂದಿಗೆ ಕೆಲಸ ಮಾಡುವ ಗ್ರೇಟ್ ಎಲಾನ್ ಮಸ್ಕ್ ಅವರು ಸರ್ಕಾರದ ದಕ್ಷತೆಯ ಇಲಾಖೆಯನ್ನು ಮುನ್ನಡೆಸುತ್ತಾರೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇಬ್ಬರೂ ಬಿಲಿಯನೇರ್ಗಳು ತಮ್ಮ ಆಡಳಿತಕ್ಕೆ “ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತೊಗೆಯಲು, ಹೆಚ್ಚುವರಿ ನಿಯಮಾವಳಿಗಳನ್ನು ಕಡಿತಗೊಳಿಸಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಫೆಡರಲ್ ಏಜೆನ್ಸಿಗಳನ್ನು ಮರುರಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಹೊಸ ಇಲಾಖೆಯು ಸರ್ಕಾರಕ್ಕೆ ಹೊರಗಿನಿಂದ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ಆಡಳಿತ ಸುಧಾರಣೆಯಲ್ಲಿ ಈ ಇಲಾಖೆ ಮಹತ್ವದ ಪಾತ್ರ ವಹಿಸಲಿದೆ. ಜುಲೈ 4, 2026 ರ ವೇಳೆಗೆ ಅವರ ಕೆಲಸವು ಮುಕ್ತಾಯವಾಗಲಿದೆ ಎಂದು ಟ್ರಂಪ್ ಹೇಳಿದರು
— Donald J. Trump Posts From His Truth Social (@TrumpDailyPosts) November 13, 2024
“ಎಲಾನ್ ಮತ್ತು ವಿವೇಕ್ ದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಫೆಡರಲ್ ಅಧಿಕಾರಶಾಹಿಯಲ್ಲಿ ಬದಲಾವಣೆಗಳನ್ನು ತರುವುದನ್ನು ನಾನು ಎದುರು ನೋಡುತ್ತಿದ್ದೇನೆ ಇದು, ಎಲ್ಲಾ ಅಮೆರಿಕನ್ನರ ಜೀವನವನ್ನು ಉತ್ತಮಗೊಳಿಸುತ್ತದೆ. ಮುಖ್ಯವಾಗಿ, ನಮ್ಮ ವಾರ್ಷಿಕ $6.5 ಟ್ರಿಲಿಯನ್ ಡಾಲರ್ಗಳ ಸರ್ಕಾರಿ ವೆಚ್ಚದ ಸದ್ಬಳಕೆಯಾಗುವಂತೆ ನೋಡಿಕೊಳ್ಳಲಿದೆ ಈ ಇಲಾಖೆ.
ವಿವೇಕ್ ರಾಮಸ್ವಾಮಿ ಹರ್ಷ
ಇನ್ನು ಟ್ರಂಪ್ ಸರ್ಕಾರದಲ್ಲಿ ಮಹತ್ವದ ಹುದ್ದೆ ದೊರೆತಿರುವ ಬಗ್ಗೆ ವಿವೇಕ್ ರಾಮಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ರಾಮಸ್ವಾಮಿ ಅವರು X ಪೋಸ್ಟ್ನಲ್ಲಿ ಮಸ್ಕ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಯಾವುದೇ ಮೃದು ಧೋರಣೆ ತೋರುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
We will not go gently, @elonmusk. 🇺🇸 https://t.co/sbVka2vTiW
— Vivek Ramaswamy (@VivekGRamaswamy) November 13, 2024
ಎಲಾನ್ ಮಸ್ಕ್ ಪ್ಲ್ಯಾನ್ ಏನು?
ಎಲಾನ್ ಮಸ್ಕ್ ಅವರು ಇಲಾಖೆಯ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರದ ದಕ್ಷತೆಯ ಇಲಾಖೆಯ ಎಲ್ಲಾ ಕ್ರಮಗಳನ್ನು ಗರಿಷ್ಠ ಪಾರದರ್ಶಕತೆಗಾಗಿ ಆನ್ಲೈನ್ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ದುಂದು ವೆಚ್ಚಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕು ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತದೆ ಎಂದಿದ್ದಾರೆ.
All actions of the Department of Government Efficiency will be posted online for maximum transparency.
— Elon Musk (@elonmusk) November 13, 2024
Anytime the public thinks we are cutting something important or not cutting something wasteful, just let us know!
We will also have a leaderboard for most insanely dumb… https://t.co/1c0bAlxmY0
ಈ ಸುದ್ದಿಯ್ನೂ ಓದಿ: Donald Trump: ಕೊನೆಯ ಕ್ಷಣದಲ್ಲಿ ಕಾಶ್ ಪಟೇಲ್ ಹೆಸರು ಕೈಬಿಟ್ಟ ಟ್ರಂಪ್-CIA ಮುಖ್ಯಸ್ಥರಾಗಿ ಜಾನ್ ರಾಟ್ಕ್ಲಿಫ್ ನೇಮಕ