Thursday, 12th December 2024

ಪೊಲೀಸ್ ವಶದಲ್ಲಿರುವ ಆತ್ಮಹತ್ಯೆಗೆ ಡಿಆರ್‌ಡಿಒ ವಿಜ್ಞಾನಿ ಯತ್ನ

DRDO

ದೆಹಲಿ: ರೋಹಿಣಿ ಜಿಲ್ಲಾ ನ್ಯಾಯಾಲಯದೊಳಗೆ ಸ್ಫೋಟಕವಿರಿಸಿದ ಆರೋಪದಲ್ಲಿ ಸೆರೆಯಾಗಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿ ಭರತ್‌ ಭೂಷಣ್‌ ಕಟಾರಿಯಾ, ಪೊಲೀಸ್ ವಶದಲ್ಲಿರು ವಾಗಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಡಿ.9ರಂದು ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಬ್ಬರು ಗಾಯ ಗೊಂಡಿದ್ದರು. ಇದರ ಹಿಂದೆ ಕಟಾರಿಯಾ ಕೈವಾಡವಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ಬಂಧಿಸಲಾಗಿದೆ. ಸ್ಫೋಟಕ್ಕೆ ಅವರು ಸುಧಾರಿತ ಐಇಡಿ ಬಳಸಿದ್ದರು. ಈ ಹಿನ್ನೆಲೆ ಯಲ್ಲಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಶೌಚಗೃಹದಲ್ಲಿ ಹ್ಯಾಂಡ್ ವಾಶ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಕಟಾರಿಯಾ ಅವರು ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.