ನವದೆಹಲಿ: ಗುಡ್ಡಗಾಡು ಮತ್ತು ಗ್ರಾಮೀಣ ಭಾಗಕ್ಕೆ ಡ್ರೋಣ್‍ಗಳ ಮೂಲಕ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಾಯೋಗಿಕ ಪರೀಕ್ಷೆ ಹಾರಾಟವನ್ನು ಅರುಣಾಚಲ ಪ್ರದೇಶದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ದಿನದಂದು ಆರಂಭಿಸಲಾಗಿದೆ.
76ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ಪಶ್ಚಿಮ ಕಮೆಂಗ್ ಜಿಲ್ಲೆಯ ಸೆಪ್ಪಾ ನಗರದಲ್ಲಿ ಈ ಸೇವೆಯನ್ನು ರೆಡ್‍ವಿಂಗ್ ಎಂಬ ನವೋದ್ಯಮ ಲೋಕಾರ್ಪಣೆ ಮಾಡಿದೆ. ಹೈಬ್ರೀಡ್ ಮಾದರಿಯಲ್ಲಿ ಡ್ರೋಣ್‍ಗಳು ಲಂಬಾಕಾರದಲ್ಲಿ ಮೇಲೇರುವುದು ಮತ್ತು ಇಳಿಯುವ ವ್ಯವಸ್ಥೆ ಕಲ್ಲಿಸಲಾಗಿದೆ.
2021ರಲ್ಲಿ ಅರುಣಾಚಲ ಪ್ರದೇಶದಲ್ಲಿ ಕಡತಗಳ ಅಧ್ಯಯನ ಆರಂಭಿಸಲಾಯಿತು. ಸ್ಥಳೀಯವಾದ ವಿತರಣಾ ವ್ಯವಸ್ಥೆ, ರೋಗ ಗಳ ಮಾದರಿ ಅಧ್ಯಯನ ನಡೆಸಲಾಯಿತು. ಸೆಪ್ಪಾದ ಭೂಗೋಳ ಹಾಗೂ ಪ್ರಾಕೃತಿಕ ಆಧಾರದ ಮೇಲೆ ಇಲ್ಲಿ ಡ್ರೋಣ್ ಸೇವೆ ಅಗತ್ಯ ಎಂಬದನ್ನು ಸ್ಪಷ್ಟಪಡಿಸಿಕೊಂಡು ಸೇವೆ ಶುರು ಮಾಡಲಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವಿಜ್ನೇಶ್ ಶಾಂತನಮ್ ಹೇಳಿದ್ದಾರೆ.
ಡ್ರೋಣ್ ಸೇವೆಯಿಂದ ಔಷಧಿ ಹಾಗೂ ಆರೋಗ್ಯ ಸೇವೆಗಳನ್ನು ಶೀಘ್ರವೇ ತಲುಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.