Friday, 22nd November 2024

2 ಕೋಟಿ ರೂ ಮೌಲ್ಯದ ಮಾದಕವಸ್ತು ವಶ: ಕಳ್ಳಸಾಗಣೆದಾರರ ಬಂಧನ

ಹ್ರೈಚ್: ಉತ್ತರ ಪ್ರದೇಶದ ಭಾರತ -ನೇಪಾಳ ಗಡಿ ಬಳಿ 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕವಸ್ತುವನ್ನು ಸಾಗಣೆ ಮಾಡುತ್ತಿದ್ದ ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ.

ಸುಮಾರು 435 ಗ್ರಾಂ ಮಾದಕವಸ್ತುದೊಂದಿಗೆ ರೂಪೈದಿಹಾಳ ರೈಲು ನಿಲ್ದಾಣದ ಬಳಿ ಬರುತ್ತಿದ್ದ ಆರೋಪಿಗಳನ್ನು ತಡೆದು ಸ್ಥಳೀಯ ಪೋಲೀಸ್ ಮತ್ತು ಸಶಸ್ತ್ರ ಸೀಮಾ ಬಲದ ಅಧಿಕಾರಿಗಳು ಜಂಟಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಳ್ಳಸಾಗಣೆದಾರರ ಬಳಿ ವಶಪಡಿಸಿಕೊಳ್ಳಲಾದ ಮದಕವಸ್ತು ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ 2.17 ಕೋಟಿ ರೂಪಾಯಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.

ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ತಾಜ್ ಬಾಬು ಅಲಿಯಾಸ್ ಸಮೀರ್, ಬಬ್ಲು ಅಲಿಯಾಸ್ ಮೊಹಮ್ಮದ್ ಅಮೀನ್, ಸಂಜಯ್ ಕೇವತ್ ಮತ್ತು ದಿನೇಶ್ ಎಂದು ಗುರುತಿಸಲಾಗಿದೆ.