Monday, 28th October 2024

ದೇಶದ 62 ರೈಲು ನಿಲ್ದಾಣಗಳಲ್ಲಿ ನಾಳೆಯಿಂದ ಇ-ಕ್ಯಾಟರಿಂಗ್ ಸೇವೆ ಆರಂಭ

ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ದೇಶದ ಆಯ್ದ ನಿಲ್ದಾಣಗಳಲ್ಲಿ ಫೆಬ್ರವರಿ 1ರಿಂದ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದೆ.

2014ರಲ್ಲಿ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಸೇವೆ ಆರಂಭಿಸಿತ್ತು. ವೆಬ್ ಸೈಟ್ ಅಥವ ಪೋನ್ ಮೂಲಕ ಪ್ರಯಾಣಿ ಕರು ಆಹಾರವನ್ನು ಆರ್ಡರ್ ಮಾಡಿ ಪಡೆಯಬಹುದಾಗಿತ್ತು. ಆದರೆ, ಕೋವಿಡ್ ಸಮಯದಲ್ಲಿ ಭಾರತೀಯ ರೈಲ್ವೆ ಸ್ಥಗಿತಗೊಳಿಸಿತ್ತು. ಸುಮಾರು 1 ವರ್ಷದ ಬಳಿಕ ಈ ಸೇವೆಯನ್ನು ಪುನಃ ಆರಂಭಿಸಲಾಗುತ್ತಿದೆ.

ಫುಡ್ ಆನ್ ಟ್ರಾಕ್ ಅಪ್ಲಿಕೇಶನ್‌ ಮೂಲಕ ಪ್ರಯಾಣಿಕರು ಆಹಾರಕ್ಕಾಗಿ ಮನವಿ ಸಲ್ಲಿಸಬಹುದಾಗಿದೆ.

ದೆಹಲಿ, ಲಕ್ನೋ, ಭೋಪಾಲ್, ಪಾಟ್ನಾ, ಸೂರತ್, ಅಹಮದಾಬಾದ್, ಪುಣೆ, ಹೌರಾ, ವಿಜಯವಾಡಿ, ಎರ್ನಾಕುಲಂ, ಉಜ್ಜೈನಿ ಸೇರಿದಂತೆ ದೇಶದ 62 ರೈಲು ನಿಲ್ದಾಣಗಳಲ್ಲಿ ಸೋಮವಾರದಿಂದ ಇ-ಕ್ಯಾಟರಿಂಗ್ ಸೇವೆ ಆರಂಭವಾಗಲಿದೆ.

ಪ್ರಯಾಣಿಕರು 1323 ನಂಬರ್‌ಗೆ ಕರೆ ಮಾಡುವ ಮೂಲಕವೂ ಆಹಾರಕ್ಕಾಗಿ ಆರ್ಡರ್‌ ಸಲ್ಲಿಸಬಹುದು. ಜನರು ಐಆರ್‌ಸಿಟಿಸಿಯ Food on track ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಬೇಡಿಕೆ ಸಲ್ಲಿಸಬಹುದು. ಜನರ ಉಪಯೋಗಕ್ಕಾಗಿ ಕ್ಯಾಶ್ ಆನ್ ಡೆಲಿವರಿ ವ್ಯವಸ್ಥೆ ಸಹ ಸ್ಥಾಪಿಸಲಾಗಿದೆ.