Thursday, 12th December 2024

ಸಂಸತ್‌, ವಿಧಾನ ಮಂಡಲಗಳಲ್ಲಿ ಇ-ವಿಧಾನ್ ಯೋಜನೆ

ನವದೆಹಲಿ: ಸಂಸತ್ತು ರಾಜ್ಯ ವಿಧಾನ ಮಂಡಲಗಳ ಕಾರ್ಯವೈಖರಿ ಕಾಗದರಹಿತವಾಗಿರಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮಹಾತ್ವಾಕಾಂಕ್ಷಿ ಇ-ವಿಧಾನ್ ಯೋಜನೆ ತರಲು ಮುಂದಾಗಿದೆ.

ರಾಷ್ಟ್ರೀಯ ಇ-ವಿಧಾನ ಅರ್ಜಿ(ನೆವಾ)ಎಲ್ಲಾ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬರಲಿದ್ದು ಹಿಮಾಚಲ ಪ್ರದೇಶ ವಿಧಾನಸಭೆಯ ಮಾದರಿಯಲ್ಲಿ ಕಾಗದರಹಿತವಾಗಿ ಕೆಲಸ ಮಾಡಲು ಯೋಜನೆ ರೂಪಿಸುತ್ತಿದೆ. ಸದನದ ಸದಸ್ಯರಿಗೆ ಕೈ ಬೆರಳ ತುದಿಯಲ್ಲಿಯೇ ಮಾಹಿತಿ ಸಿಗುವಂತಾಗಬೇಕು. ಸದನ ಸದಸ್ಯರು ಮೊಬೈಲ್ ಫೋನ್/ಲ್ಯಾಪ್ ಟಾಪ್ ಮೂಲಕ ಸದನದ ಕಲಾಪ ವೀಕ್ಷಿಸಿ ಪ್ರಶ್ನೆಗಳನ್ನು ಕೇಳುವುದು ಮತ್ತು ಕಲಾಪಗಳಿಗೆ ಸಂಬಂಧಪಟ್ಟ ಇತರ ದಾಖಲೆಗಳನ್ನು ಆನ್ ಲೈನ್ ನಲ್ಲಿಯೇ ನೋಡುವಂತಾಗಬೇಕು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ 44 ಮಿಷನ್ ಮೋಡ್ ಪ್ರಾಜೆಕ್ಟ್ಸ್(ಎಂಎಂಪಿ)ನ್ನು ಜಾರಿಗೆ ತರಲು ಸಂಸದೀಯ ವ್ಯವಹಾರಗಳ ಸಚಿವಾಲಯ ಮುಂದಾಗಿದೆ. ಹಿಮಾಚಲ ಪ್ರದೇಶದ ವಿಧಾನ ಸಭೆಯನ್ನು ನೆವಾಕ್ಕೆ ಉನ್ನತೀ ಕರಿಸಲಾಗಿದ್ದು ಒಂದು ಆಪ್ ನಡಿ 39 ಸದನಗಳನ್ನು ಸೇರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 39 ಶಾಸನ ಸಭೆಗಳು ಲೋಕಸಭೆ, ರಾಜ್ಯಸಭೆ, 31 ವಿಧಾನಸಭೆಗಳು ಮತ್ತು 6 ಪರಿಷತ್ ಗಳನ್ನು ಹೊಂದಿದೆ.