ಕಠ್ಮಂಡು: ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಭೂಕಂಪದಲ್ಲಿ(Earthquake)ಕನಿಷ್ಠ 36 ಜನ ಅಸುನೀಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇನ್ನು ಭೀಕರ ದುರ್ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ಹಲವು ಕಟ್ಟಡಗಳು ಕುಸಿದು ಬಿದ್ದಿವೆ.
7.1 ತೀವ್ರತೆಯ ಪ್ರಬಲ ಭೂಕಂಪವು ದಕ್ಷಿಣ ಚೀನಾದ ಟಿಬೆಟ್‌ಗೆ ಅಪ್ಪಳಿಸಿದೆ. ನೇಪಾಳದಾದ್ಯಂತ ಮತ್ತು ಭಾರತ ಭೂತಾನ್ ಮತ್ತು ಬಾಂಗ್ಲಾದೇಶದಲ್ಲೂ ಭೂಮಿ ಅಲುಗಾಡಿದೆ. ಭಾರತದಲ್ಲಿ ಬಿಹಾರ, ದೆಹಲಿ-ಎನ್‌ಸಿಆರ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.
Wow! Here's another look at the now Upgraded M7.1 #Earthquake from a Khumjung, #Nepal Live Cam moments ago. 🥴 #NepalEarthquake pic.twitter.com/qtVklIJa8e
— LiveCamChaser (@LiveCamChaser) January 7, 2025
ಭೂಕಂಪದ ಕೇಂದ್ರವು ಲೋಬುಚೆಯಿಂದ ಈಶಾನ್ಯಕ್ಕೆ 93 ಕಿ.ಮೀ. ದೂರದಲ್ಲಿತ್ತು. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಇಂದು ಬೆಳಗ್ಗೆ 6:30ಕ್ಕೆ ಭೂಕಂಪನ ಸಂಭವಿಸಿದೆ. ಮಂಗಳವಾರ, ನೇಪಾಳದಲ್ಲಿ ಸಂಭವಿಸಿದ ಭೂಕಂಪ ತೀವ್ರತೆಗೆ ಭಾರತದಲ್ಲಿ ಬಿಹಾರ, ದೆಹಲಿ-ಎನ್‌ಸಿಆರ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.
An earthquake with a magnitude of 7.1 on the Richter Scale hit 93 km North East of Lobuche, Nepal at 06:35:16 IST today: USGS Earthquakes pic.twitter.com/CY3KtWAWO4
— ANI (@ANI) January 7, 2025
ಭೂಕಂಪದ ಕೇಂದ್ರ ಬಿಂದು ನೇಪಾಳದ ಗೋಕರ್ಣೇಶ್ವರದ ಬಳಿ ಇದೆ ಎಂದು ವರದಿಯಾಗಿದೆ. ನಿಖರವಾದ ಪ್ರಮಾಣವನ್ನು ಇನ್ನೂ ದೃಢೀಕರಿಸಬೇಕಾಗಿದ್ದರೂ, ಆರಂಭಿಕ ಅಂದಾಜುಗಳು ರಿಕ್ಟರ್ ಮಾಪಕದಲ್ಲಿ 6.0 ಮತ್ತು 7.0 ರ ನಡುವೆ ಇರಬಹುದೆಂದು ಸೂಚಿಸುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಬಲವಾಗಿ ಭೂಮಿ ಅಲುಗಾಡಿರುವ ಹಲವಾರು ವರದಿಗಳನ್ನು ಹಂಚಿಕೊಳ್ಳಲಾಗಿದೆ. ಟಿಬೆಟ್, ನೇಪಾಳ (ರಾಜಧಾನಿ ಕಠ್ಮಂಡು ಸೇರಿದಂತೆ) ಮತ್ತು ಭಾರತ, ಭೂತಾನ್ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.
ಮೋತಿಹಾರಿ ಮತ್ತು ಸಮಸ್ಟಿಪುರ ಸೇರಿದಂತೆ ಬಿಹಾರದ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 6.40ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಸುದ್ದಿಯನ್ನೂ ಓದಿ: Earthquake: ಪಶ್ಚಿಮ ಘಟ್ಟದಲ್ಲಿ ಭೂಕಂಪದ ಅನುಭವ, ಜನ ಭಯಭೀತ