Sunday, 15th December 2024

ದಿಂಡಿಗಲ್’ನಲ್ಲಿ ಮೂರು ಲಘು ಭೂಕಂಪ

ಚೆನೈ: ಎರಡು ಗಂಟೆಗಳ ಅವಧಿಯಲ್ಲಿ, ತಮಿಳುನಾಡಿನ ದಿಂಡಿಗಲ್ ಪ್ರದೇಶದಲ್ಲಿ ಶುಕ್ರವಾರ ಮೂರು ಲಘು ಭೂಕಂಪಗಳು ಸಂಭವಿಸಿವೆ.

ಮೂರು ಸೂಕ್ಷ್ಮ ಭೂಕಂಪಗಳ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 1.2 ಮತ್ತು 1.5 ರ ನಡುವೆ ಇತ್ತು. ಸುಮಾರು 464 ಕಿಮೀ ದೂರದಲ್ಲಿರುವ ದಿಂಡಿಗಲ್ ಜಿಲ್ಲೆಯ ಒಡ್ಡನ್‌ಛತ್ರಂನಲ್ಲಿ ಕಂಡುಬಂದವು. ಮೊದಲ ಕಂಪನವು 4.33 AM ಕ್ಕೆ ಅನುಭವವಾಯಿತು.  ನಂತರ 6.04 AM ಮತ್ತು ಇನ್ನೊಂದು 6.07 AM ಕ್ಕೆ ಈ ಎರಡೂ ನಂತರದ ಕಂಪನಗಳ ತೀವ್ರತೆಯ ಪ್ರಮಾಣ 1.5 ಮತ್ತು ಎಲ್ಲಾ ಮೂರರ ಆಳವು 10 ಕಿ.ಮೀ. ಒಳಗಿತ್ತು.

ಒಡ್ಡನ್‌ಛತ್ರಂ ಸಮೀಪದ ಹಳ್ಳಿಯೊಂದರಲ್ಲಿ ಒಂದೆರಡು ಮನೆಗಳಲ್ಲಿ ಬಿರುಕು ಬಿಟ್ಟಿರುವ ಚಿತ್ರಗಳನ್ನು ತೋರಿಸಿವೆ.