ಕಂಧಮಾಲ್: ಉತ್ತರಾಖಂಡ, ಒಡಿಶಾ ರಾಜ್ಯಗಳಲ್ಲಿ ಶನಿವಾರ ಲಘು ಭೂಕಂಪ ಸಂಭವಿಸಿದ್ದು, 3.3 ರಷ್ಟು ತೀವ್ರತೆ ದಾಖಲಾ ಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಉತ್ತರಾಖಂಡದ ಉತ್ತರಕಾಶಿಯಲ್ಲಿ ಬೆಳಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.3 ರಷ್ಟು ತೀವ್ರತೆ ದಾಖಲಾಗಿದೆ. ಭೂಮಿಯಿಂದ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವಿದೆ. ಒಡಿಶಾದ ಕಂಧಮಾಲ್ ಮತ್ತು ಗಂಜಮ್ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಉಂಟಾಗಿದೆ.
5 ಕಿ.ಮೀ ಆಳದಲ್ಲಿ ಭೂಕಂಪನ ದ ಕೇಂದ್ರಬಿಂದು ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ.