Friday, 13th December 2024

ವೆಲ್ಲೂರಿನಲ್ಲಿ 3.6 ತೀವ್ರತೆಯ ಭೂಕಂಪನ

ಚೆನೈ: ತಮಿಳುನಾಡಿನ ವೆಲ್ಲೂರಿನಲ್ಲಿ 3.6 ತೀವ್ರತೆಯ ಭೂಕಂಪನ ಸಂಭವಿ ಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ವೆಲ್ಲೂರಿನ ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ 25 ಕಿಮೀ ಆಳದಲ್ಲಿ ಮತ್ತು 59 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಕೇಂದ್ರದ ನೋಡಲ್ ಏಜೆನ್ಸಿ ತಿಳಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಯಾವುದೇ ಸಾವುನೋವುಗಳು ಅಥವಾ ಹಾನಿಗಳು ಇನ್ನೂ ದಾಖಲಾಗಿಲ್ಲ.

ಭಾರೀ ಮಳೆಯ ಹಿನ್ನೆಲೆಯಲ್ಲಿ ವೆಲ್ಲೂರ್ ಹೈ ಅಲರ್ಟ್ ಆಗಿದ್ದು, ಜಿಲ್ಲೆಯ ಬಹುತೇಕ ಆಣೆಕಟ್ಟುಗಳು ಪೂರ್ಣ ಭರ್ತಿ ಆಗಿವೆ. ವೆಲ್ಲೂರು ಮತ್ತು ತಮಿಳುನಾಡಿನ ರಾಣಿಪೇಟ್ ಮತ್ತು ತಿರುಪತ್ತೂರು ಜಿಲ್ಲೆ ಗಳಲ್ಲಿ ಪಾಲಾರ್ ನದಿ, ಚೆಕ್ ಡ್ಯಾಂಗಳು ಮತ್ತು ಕೆಳಮಟ್ಟದ ಸೇತುವೆಗಳನ್ನು ದಾಟಲು ಸಂಪೂರ್ಣ ನಿಷೇಧ ವಿಧಿಸಲಾಗಿದೆ.