ಭೋಪಾಲ್: 2025ರಲ್ಲಿ 4 ಗ್ರಹಣಗಳು ಸಂಭವಿಸಲಿದ್ದು, ಭಾರತದಲ್ಲಿ ಒಂದು ಮಾತ್ರ ಗೋಚರಿಸಲಿದೆ ಎಂದು ಉಜ್ಜೈನ್ ಮೂಲದ ಜಿವಾಜಿ ವೀಕ್ಷಣಾಲಯದ ಅಧಿಕಾರಿಗಳು(Jiwaji Observatory) ತಿಳಿಸಿದ್ದಾರೆ (Eclipses Visible).
2 ಚಂದ್ರ ಗ್ರಹಣ ಮತ್ತು 2 ಸೂರ್ಯ ಗ್ರಹಣ ಸಂಭವಿಸಲಿದೆ. 2025ರ ಮಾರ್ಚ್ 14ರಿಂದ ಸಂಪೂರ್ಣ ಚಂದ್ರಗ್ರಹಣ ನಡೆಯಲಿದೆ. ಇದು ಮುಂಜಾನೆಯ ವೇಳೆ ಸಂಭವಿಸುವುದರಿಂದ ಭಾರತದಲ್ಲಿ ಗೋಚರಿಸುವ ಸಾಧ್ಯತೆ ತುಂಬಾ ಕಡಿಮೆ ಎಂದು ವೀಕ್ಷಣಾಲಯದ ಅಧೀಕ್ಷಕ ಡಾ. ರಾಜೇಂದ್ರ ಪ್ರಕಾಶ್ ಗುಪ್ತಾ(Rajendra Prakash Gupt) ಹೇಳಿದ್ದಾರೆ.
ಅಮೆರಿಕ, ಪಶ್ಚಿಮ ಯೂರೋಪ್, ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಹಾಗೂ ಉತ್ತರ ಅಂಟ್ಲಾಟಿಕ್ ಮಹಾಸಾಗರದ ಬಳಿ ಸಂಪೂರ್ಣ ಗ್ರಹಣ ಗೋಚರಿಸಲಿದೆ.
Only 1 Out Of 4 Eclipses In 2025 To Be Visible From India: Dates And Details Here https://t.co/j3g5ZbwjNO pic.twitter.com/sRuHO7GslC
— NDTV (@ndtv) December 29, 2024
ಮಾರ್ಚ್ 29ರಂದು ಭಾಗಶಃ ಸೂರ್ಯ ಗ್ರಹಣ ಇರುತ್ತದೆ. ಆದರೆ ಭಾರತದಲ್ಲಿ ಕಾಣುವುದಿಲ್ಲ. ಉತ್ತರ ಅಮೆರಿಕ, ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಇಡೀ ಯುರೋಪ್ ಮತ್ತು ವಾಯವ್ಯ ರಷ್ಯಾದಲ್ಲಿ ಗ್ರಹಣ ಗೋಚರಿಸಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ʼʼಸೆಪ್ಟೆಂಬರ್ 7 ಮತ್ತು 8ರ ನಡುವೆ ಸಂಭವಿಸುವ ಪೂರ್ಣ ಚಂದ್ರಗ್ರಹಣವು ಭಾರತ ದೇಶದಲ್ಲಿ ಗೋಚರಿಸಲಿದೆ. ಇದು ಏಷ್ಯಾದ ಇತರ ದೇಶಗಳ ಜತೆಗೆ ಯುರೋಪ್, ಅಂಟಾರ್ಟಿಕಾ, ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿಯೂ ಗೋಚರಿಸುತ್ತದೆʼʼ ಎಂದು ಗುಪ್ತಾ ವಿವರಿಸಿದ್ದಾರೆ.
2025ರ ಕೊನೆಯ ಗ್ರಹಣವು ಸೆಪ್ಟೆಂಬರ್ 21 ಮತ್ತು 22ರ ನಡುವೆ ಭಾಗಶಃವಾಗಿರುತ್ತದೆ. ಭಾರತದಲ್ಲಿ ಈ ಖಗೋಳ ವಿಸ್ಮಯ ವೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ಭಾಗಶಃ ಸೂರ್ಯ ಗ್ರಹಣವು ನ್ಯೂಜಿಲೆಂಡ್, ಪೂರ್ವ ಮೆಲನೇಷಿಯಾ, ದಕ್ಷಿಣ ಪಾಲಿನೇಷ್ಯಾ ಮತ್ತು ಪಶ್ಚಿಮ ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
2025ರಲ್ಲಿ ಪ್ಲೇಗ್; ನಾಸ್ಟ್ರಾಡಾಮಸ್ ಭವಿಷ್ಯವಾಣಿ ಹೇಳೋದೇನು?
ಪ್ರಸಿದ್ಧ ಫ್ರೆಂಚ್ (French) ಭವಿಷ್ಯಕಾರ ನಾಸ್ಟ್ರಾಡಾಮಸ್ ತಮ್ಮ ನಿಖರ ಭವಿಷ್ಯವಾಣಿಗಳಿಂದ ಜನಪ್ರಿಯರಾಗಿದ್ದಾರೆ. ಜರ್ಮನಿಯಲ್ಲಿ ಹಿಟ್ಲರ್‌ನ ಉದಯದಿಂದ ಹಿಡಿದು ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಹತ್ಯೆಯವರೆಗೂ ಅವರು ನುಡಿದ ಹಲವು ಭವಿಷ್ಯ ಅಕ್ಷರಶಃ ಸತ್ಯವಾಗಿದೆ. ಹಾಗಾಗಿ ನಾಸ್ಟ್ರಾಡಾಮಸ್ ಭವಿಷ್ಯ ಎಂದರೆ ಜಗತ್ತಿನ ಜನರು ಹೆದರುತ್ತಾರೆ. 2024 ಮುಗಿಯುತ್ತಿದ್ದಂತೆ ನಾಸ್ಟ್ರಾಡಾಮಸ್ ಭವಿಷ್ಯವಾಣಿ ಬಹು ಚರ್ಚಿತ ವಿಷಯವಾಗಿದ್ದು, ಹೊಸ ವರ್ಷದಲ್ಲಿ ಅಂದರೆ 2025ರಲ್ಲಿ ಸಂಭವಿಸಬಹುದಾದ ಅಹಿತಕರ ಘಟನೆಗಳ ಬಗ್ಗೆ ಅವರು ಬಹು ಹಿಂದೆಯೇ ಹೇಳಿರುವುದರಿಂದ ಜನರು ಈಗ ಭಯಭೀತರಾಗಿದ್ದಾರೆ.
ಪ್ಲೇಗ್ ಮತ್ತು ಯುದ್ಧ
ಹೊಸ ವರ್ಷದಲ್ಲಿ ಭಯಾನಕ ಯುದ್ಧಗಳು ನಡೆಯಲಿವೆ. ಇಂಗ್ಲೆಂಡ್ ದೇಶವು ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಾಚೀನ ಪ್ಲೇಗ್‌ನಂತಹ ರೋಗವು ಜಗತ್ತನ್ನು ಏಕಾಏಕಿ ಬಾಧಿಸಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಅವರು ನುಡಿದಿದ್ದ COVID-19 ಸಾಂಕ್ರಾಮಿಕ ಭವಿಷ್ಯವು ನಿಜವಾಗಿರುವುದರಿಂದ ಈ ಭವಿಷ್ಯವೂ ನಿಜವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಜನರು ಆತಂಕಗೊಂಡಿದ್ದಾರೆ.
ಭೂಮಿಗೆ ಕ್ಷುದ್ರಗ್ರಹ ಘರ್ಷಣೆ?
ನಾಸ್ಟ್ರಾಡಾಮಸ್ ನುಡಿದಿರುವ ಹೊಸ ವರ್ಷದ ಭವಿಷ್ಯದಿಂದ ಅಷ್ಟಾಗಿ ನಷ್ಟವಾಗುವುದಿಲ್ಲವಾದರೂ, 2025ರ ವರ್ಷದಲ್ಲಿ ಭೂಮಿಯೊಂದಿಗೆ ಕ್ಷುದ್ರಗ್ರಹ ಘರ್ಷಣೆಯಾಗಲಿದ್ದು, ಗ್ರಹವು ತೀರಾ ಅಪಾಯಕಾರಿ ಸಾಮೀಪ್ಯದಲ್ಲಿ ಬರಬಹುದು ಎನ್ನುವ ಭವಿಷ್ಯವಾಣಿ ಭಯಗೊಳಿಸಿದೆ. ತಜ್ಞರು ಹೇಳುವಂತೆ ಭವಿಷ್ಯವು ಭೂಮಿಯಿಂದ ಜೀವಿಗಳ ನಾಶವನ್ನು ಸೂಚಿಸುತ್ತದೆಯಾದರೂ, ಕ್ಷುದ್ರಗ್ರಹಗಳು ಗ್ರಹದ ಹತ್ತಿರ ಬರುವುದು ಹೊಸ ವಿದ್ಯಮಾನವೇನಲ್ಲ. ಪ್ರತಿ ವರ್ಷ ನೂರಾರು ಕ್ಷುದ್ರಗ್ರಹಗಳು ಭೂಮಿಯನ್ನು ದಾಟುತ್ತವೆ ಮತ್ತು ಅವುಗಳಲ್ಲಿ ಹೆಚ್ಚಿನವು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತವೆ. ಹಾಗಾಗಿ ಭಯಪಡುವುದು ಬೇಡ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Drugs Case: ಡ್ರಗ್ಸ್ ಕೇಸ್‌ನಲ್ಲಿ ಶಾಸಕಿ ಪುತ್ರ ಅರೆಸ್ಟ್!