Monday, 16th September 2024

ಚಿನ್ನಾಭರಣ ಮಾಲೀಕರ ಕಚೇರಿ, ನಿವಾಸಿಗಳ ಮೇಲೆ ಇಡಿ ದಾಳಿ, 150 ಕೋ. ಮೌಲ್ಯದ ಆಸ್ತಿ ವಶ

ಹೈದ್ರಾಬಾದ್: ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೈದ್ರಾಬಾದ್ ಮತ್ತು ವಿಜಯವಾಡದಲ್ಲಿ ಚಿನ್ನಾಭರಣ ಮಾಲೀಕರ ಕಚೇರಿ ಹಾಗೂ ನಿವಾಸಿಗಳ ಮೇಲೆ ನಡೆಸಿದ ದಾಳಿ ಸಂದರ್ಭ 150 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡ ಲಾಗಿದೆ.

ಎಂಬಿಎಸ್ ಜ್ಯುವೆಲಯರ್ಸ್, ಮುಸಾದ್ದಿ ಲಾಲ್ ಜೇಮ್ಸ್ ಅಂಡ್ ಜುವೆಲ್ಸ್ ಇಂಡಿಯಾ ಮತ್ತು ಅದರ ನಿರ್ದೇಶಕ ರಾದ ಸುಕೇಶ್ ಗುಪ್ತ ಮತ್ತು ಅನುರಾಗ್ ಗುಪ್ತ ಅವರ ಮನೆ ಹಾಗೂ ಮಳಿಗೆಗಳ ಮೇಲೆ ಇತ್ತೀಚೆಗೆ ಶೋಧ ಕಾರ್ಯ ನಡೆಸಿದಾಗ ಸುಮಾರು 149 ಕೋಟಿ ಮೌಲ್ಯದ ಆಭರಣಗಳು, 1.96 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಸುಕೇಶ್ ಗುಪ್ತ ಅವರನ್ನು ಇಡೀ ಬಂಧಿಸಿ ನಾಂಧಿ ಪಲ್ಲಿಯಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ.

ವಿದೇಶಿ ವಿನಿಮಯ ಕಾಯ್ದೆಯನ್ನು ಸ್ಪಷ್ಪವಾಗಿ ಉಲ್ಲಂಘಿಸಿ ನಿರಂತರವಾಗಿ ಚಿನ್ನಾಭರಣ ವ್ಯವಹಾರದಲ್ಲಿ ಅಕ್ರಮ ನಡೆಸ ಲಾಗಿತ್ತು ಎಂದು ಇಡಿ ಆರೋಪಿಸಿದೆ.