Thursday, 12th December 2024

ಮಾ.31ರವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳು ಶಟ್‌ಡೌನ್‌: ಪಂಜಾಬ್‌ ಹೊಸ ಮಾರ್ಗಸೂಚಿ

ಲೂಧಿಯಾನ: ಪಂಜಾಬ್‌ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದ್ದಾರೆ.

ಹೊಸ ಮಾರ್ಗಸೂಚಿ ಅನ್ವಯ, ಮಾ.31ರವರೆಗೆ ಎಲ್ಲ ಶಿಕ್ಷಣ ಸಂಸ್ಥೆಗಳನ್ನ ಮುಚ್ಚಲಾಗುವುದು. ಇನ್ನು ಸಿನೆಮಾ ಹಾಲ್‌ʼನ ಸಾಮರ್ಥ್ಯವನ್ನ ಶೇ.50 ಕ್ಕೆ ಇಳಿಸಿಲಾಗಿದ್ದು, ಹೆಚ್ಚು ಹಾನಿಗೊಳಗಾದ 11 ಜಿಲ್ಲೆಗಳಲ್ಲಿ, ನೈಟ್‌ ಕರ್ಫ್ಯೂ ಜೊತೆಗೆ ಸಾಮಾಜಿಕ ಕೂಟಗಳಿಗೆ 2 ವಾರಗಳ ಕಾಲ ಸಂಪೂರ್ಣ ನಿಷೇಧ ಮಾಡಲಾಗುವುದು.

ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇವಲ 20 ಜನರಿಗೆ ಅವಕಾಶ ನೀಡಲಾಗಿದೆ. ಇನ್ನು ಅಂತಿಮ ವಿಧಿಗಳು ಮತ್ತು ನಂತರ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ 20ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಪ್ರಕಟಿಸಿದೆ. ಎಲ್ಲಾ ಜಿಲ್ಲೆಗಳಲ್ಲಿ ಸೂಕ್ಷ್ಮ ಧಾರಕ ಪ್ರದೇಶಗಳನ್ನು ರಚಿಸುವ ಕಾರ್ಯತಂತ್ರವನ್ನು ಪುನಃ ಜಾರಿಗೆ ತರಲು ಆದೇಶ ಹೊರಡಿಸಲಾಗಿದೆ. ಪಂಜಾಬ್‌ನಲ್ಲಿ ಪ್ರತಿದಿನ ಕನಿಷ್ಠ 35000 ಜನರನ್ನ ಪರೀಕ್ಷಿಸಲು ಸೂಚನೆ ನೀಡಲಾಗಿದೆ. ಶಾಪಿಂಗ್ ಮಾಲ್‌ʼಗಳ ಒಳಗೆ ಒಂದು ಸಮಯದಲ್ಲಿ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಕೊರೊನಾ ಹರಡುವಿಕೆಯನ್ನು ನಿಲ್ಲಿಸಲು ಮುಂದಿನ 2 ವಾರಗಳವರೆಗೆ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸ ದಂತೆ ಪಂಜಾಬ್‌ನ ಜನರಿಗೆ ಸರ್ಕಾರದಿಂದ ಮನವಿ ಮಾಡಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily