Wednesday, 9th October 2024

ಕೋವಿಡ್‌ ಮಹಾಮಾರಿಗೆ ಕಾಂಗ್ರೆಸ್‌ ನಾಯಕ ಏಕನಾಥ್‌ ಗಾಯಕ್‌ವಾಡ್ ಬಲಿ

ಮುಂಬಯಿ: ಮಹಾರಾಷ್ಟ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಏಕನಾಥ್‌ ಗಾಯಕ್‌ವಾಡ್ ಅವರು (81) ಕೋವಿಡ್‌ನಿಂದಾಗಿ ಬುಧವಾರ ನಿಧನರಾಗಿದ್ದಾರೆ.

ಮಹಾರಾಷ್ಟ್ರ ಶಿಕ್ಷಣ ಸಚಿವೆ ವರ್ಷಾ ಗಾಯಕ್‌ವಾಡ್ ‌ಅವರ ತಂದೆ ಏಕನಾಥ್‌ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು ಎಂದು ತಿಳಿದು ಬಂದಿದೆ.

‘ಏಕನಾಥ್‌ ನಿಧನದಿಂದ ನನಗೆ ಬಹಳ ಬೇಸರವಾಗಿದೆ. ಏಕನಾಥ್ ಅವರ ನಿಧನವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟ’ ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ವಕ್ತಾರ ಸಚಿನ್‌ ಸಾವಂತ್‌ ಸಂತಾಪ ಸೂಚಿಸಿದರು.