Friday, 21st June 2024

ಗುಜರಾತ್‌, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ: ದಿನಾಂಕ ಇಂದು ಘೋಷಣೆ

ವದೆಹಲಿ: ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗವು ಇಂದು ಘೋಷಣೆ ಮಾಡಲಿದೆ. ಈ ನಿಟ್ಟಿನಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಸಂಜೆ 3 ಗಂಟೆಗೆ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ.

ಗುಜರಾತ್‌ ವಿಧಾನಸಭೆಯ ಪ್ರಸಕ್ತ ಅವಧಿ ಫೆಬ್ರುವರಿ 18, 2023ಕ್ಕೆ ಪೂರ್ಣಗೊಳ್ಳಲಿದೆ. 182 ಸದಸ್ಯರ ಬಲವಿರುವ ವಿಧಾನಸಭೆ ಯಲ್ಲಿ ಬಿಜೆಪಿಯ 111 ಶಾಸಕರು ಮತ್ತು ಕಾಂಗ್ರೆಸ್‌ನ 62 ಶಾಸಕರಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಸಭೆಯ ಪ್ರಸಕ್ತ ಅವಧಿ ಜನವರಿ 8, 2023ಕ್ಕೆ ಅಂತ್ಯಗೊಳ್ಳಲಿದೆ. ವಿಧಾನಸಭೆಯಲ್ಲಿ ಬಿಜೆಪಿಯ 45 ಶಾಸಕರು ಮತ್ತು ಕಾಂಗ್ರೆಸ್‌ನ 20 ಶಾಸಕರಿದ್ದಾರೆ.

error: Content is protected !!